ಬಿಗ್ ಮನೆಯಿಂದ ಹೊರ ಹೋಗಲು ನಿರ್ಧರಿಸಿದ ಸ್ಟ್ರಾಂಗ್ ಸ್ಪರ್ಧಿ! ಹನುಮಂತನ ನಿರ್ಧಾರಕ್ಕೆ ಕಾರಣ ಏನು?

0
Spread the love

ಬಿಗ್ ಬಾಸ್ ಸೀಸನ್ 11 ಬಹಳ ಕುತೂಹಲಕಾರಿಯಾಗಿ ಮೂಡಿ ಬರುತ್ತಿದೆ. ದಿನಕ್ಕೆ ಒಂದಿಲ್ಲೊಂದು ಟ್ವಿಸ್ಟ್ ಕೊಡುತ್ತಾ ವೀಕ್ಷಕರಿಗೆ ಬಹಳ ಮನರಂಜನೆ ಕೊಡುತ್ತಿದೆ.ಇನ್ನೂ ಬಿಗ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿರುವ ಹನುಮಂತ ಸಖತ್ ಅಗೇ ಆಟ ಆಡುತ್ತಿದ್ದು, ಈ ಮಧ್ಯೆ ಮನೆಯಿಂದ ಹೋಗಲು ನಿರ್ಧಾರ ಮಾಡಿರೋದು ಶಾಕ್ ತಂದಿದೆ.

Advertisement

ಬಿಗ್ ಬಾಸ್ ಕನ್ನಡ ಸೀಸನ್ 11’ರ 12ನೇ ವಾರದಲ್ಲಿ ಕ್ಯಾಪ್ಟನ್ಸಿ ರೇಸ್​ನಲ್ಲಿ ಆರು ಮಂದಿ ಇದ್ದರು. ಇದನ್ನು ಐದಕ್ಕೆ ಇಳಿಕೆ ಮಾಡಲು ಒಂದು ಟಾಸ್ಕ್ ನೀಡಲಾಗಿತ್ತು. ಪಕ್ಷಪಾತಿ, ಜನ ನಿರ್ವಹಣೆಯಲ್ಲಿ ಅಶಕ್ತ ಈ ರೀತಿಯ ನಾಲ್ಕು ಆಯ್ಕೆ ನೀಡಲಾಗಿತ್ತು. ಕ್ಯಾಪ್ಟನ್ಸಿ ರೇಸ್​ನಲ್ಲಿ ಇರುವ ಆರು ಮಂದಿಯ ಪೈಕಿ ಒಬ್ಬರ ಗುಣ ಯಾವುದಕ್ಕೆ ಹೊಂದಿಕೆ ಆಗುತ್ತದೆ ಎಂಬುದನ್ನು ಹೇಳಿ ಆ ಬಳಿಕ ಅವರನ್ನು ಸ್ವಿಮ್ಮಿಂಗ್​ಪೂಲ್​ಗೆ ತಳ್ಳಬೇಕು

ಜನ ನಿರ್ವಹಣೆಯಲ್ಲಿ ಅಶಕ್ತ’ ಮತ್ತಿತ್ಯಾದಿ ಆಯ್ಕೆಯಲ್ಲಿ ಹನುಮಂತ ಅವರು ಭವ್ಯಾ ಹೆಸರನ್ನು ತೆಗೆದುಕೊಂಡರು. ಆದರೆ, ಇದನ್ನು ಭವ್ಯಾ ಅವರು ಒಪ್ಪಿಕೊಳ್ಳಲೇ ಇಲ್ಲ. ಬದಲಿಗೆ ಹನುಮಂತ ಬಳಿ ವಾದಕ್ಕೆ ಇಳಿದರು. ಈ ವಾದವನ್ನು ಮುಂದುವರಿಸಲು ಹನುಮಂತಗೆ ಯಾವುದೇ ಆಸಕ್ತಿ ಇರಲಿಲ್ಲ. ಹೀಗಾಗಿ, ಅವರು ಸುಮ್ಮನಾದರು. ಆದರೆ, ಭವ್ಯಾ ಮಾತ್ರ ಏನೇನೋ ಮಾತನಾಡುತ್ತಲೇ ಇದ್ದರು. ಈ ವಿಚಾರ ಭವ್ಯಾಗೆ ಬೇಸರ ಮೂಡಿಸಿದೆ.

ದೋಸ್ತಾ ಬಸ್ ಬುಕ್ ಮಾಡು, ಊರಿಗೆ ಹೋಗ್ತೀನಿ’ ಎಂದು ಹನುಮಂತ ಹೇಳಿದರು. ಇದನ್ನು ಕೇಳಿ ಧನರಾಜ್​ಗೆ ಶಾಕ್ ಆಯಿತು. ಅವರು ಹನುಮಂತನ ಸಮಾಧಾನ ಮಾಡಲು ಪ್ರಯತ್ನಿಸಿದರು. ಆದರೆ, ಹನುಮಂತ ಅವರು ಇದಕ್ಕೆ ಒಪ್ಪಿಲ್ಲ. ‘ಇಲ್ಲಿ ನೆನಪು ಇಟ್ಟುಕೊಂಡು ಮಾತನಾಡುವವರು ಬೇಕು. ಆದರೆ, ನನಗೆ ಯಾವುದೂ ನೆನಪಿನಲ್ಲಿ ಇರಲ್ಲ. ಅಷ್ಟುದ್ದ ಮಾತನಾಡೋಕೆ ಬರಲ್ಲ. ನನಗೆ ನೆನಪಿನ ಶಕ್ತಿ ಕಡಿಮೆ ಇದೆ’ ಎಂದು ಹನುಮಂತ ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here