ವಿಜಯಸಾಕ್ಷಿ ಸುದ್ದಿ, ಗದಗ: ಹುಲಕೋಟಿಯ ಐ.ಸಿ.ಎ.ಆರ್-ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ದತ್ತು ಗ್ರಾಮವಾದ ರೋಣ ತಾಲೂಕಿನ ಮಾಡಲಗೇರಿ ಗ್ರಾಮದ ಭರಮಗೌಡ ರಾಯನಗೌಡ್ರ ಇವರ ಹೊಲದಲ್ಲಿ ಬ್ಯಾಡಗಿ ಮೆಣಸಿನಕಾಯಿ ಬೆಳೆಯ ಕ್ಷೇತ್ರೋತ್ಸವವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಕೃಷಿ ಇಂಜಿನಿಯರಿAಗ್ ವಿಜ್ಞಾನಿಗಳಾದ ಡಾ. ವಿನಾಯಕ ನಿರಂಜನ್ ಮಾತನಾಡಿ, ಕೇಂದ್ರದ ದತ್ತು ಗ್ರಾಮಗಳಾದ ಮುಂಡರಗಿ ತಾಲೂಕಿನ ಹಳ್ಳಿಗುಡಿ, ರೋಣ ತಾಲೂಕಿನ ಮಾಡಲಗೇರಿ ಹಾಗೂ ಗದಗ ತಾಲೂಕಿನ ಅಸುಂಡಿಯಲ್ಲಿ ಬ್ಯಾಡಗಿ ಮೆಣಸಿನಕಾಯಿ ಬೆಳೆಯಲ್ಲಿ ಅಧಿಕ ಇಳುವರಿ ಕೊಡುವ ಹಾಗೂ ರೋಗಗಳನ್ನು ತಡೆದುಕೊಳ್ಳುವ ರುದ್ರಾ ತಳಿಯ ಪ್ರಾತ್ಯಕ್ಷಿಕೆ ಕೈಗೊಂಡ ತಾಕುಗಳಲ್ಲಿ ಸಮಗ್ರ ಬೆಳೆ ನಿರ್ವಹಣೆಯೊಂದಿಗೆ ಅಳವಡಿಸಲಾಗಿದೆ ಎಂದು ತಿಳಿಸಿದರು.
ಕೆವಿಕೆ ತೋಟಗಾರಿಕೆ ತಜ್ಞರಾದ ಹೇಮಾವತಿ ಹಿರೇಗೌಡರ ಮಾತನಾಡಿ, ರುದ್ರಾ ತಳಿಯು ತೋಟಗಾರಿಕೆ ವಿಶ್ವವಿದ್ಯಾಲಯ ಬಾಗಲಕೋಟೆಯಿಂದ ಬಿಡುಗಡೆಯಾಗಿದ್ದು, ಬ್ಯಾಡಗಿ ಡಬ್ಬಿಯನ್ನು ಹೋಲುತ್ತದೆ. ಕಾಯಿಗಳು ಒಣಗಿದಾಗ ಕಡು ಕೆಂಪು ಬಣ್ಣಕ್ಕೆ ತಿರುಗುತ್ತದೆ ಮತ್ತು ಉತ್ತಮ ಬೆಳೆ ಸಾಮರ್ಥ್ಯ ಹೊಂದಿದೆ. ಪ್ರಾತ್ಯಕ್ಷಿಕೆ ತಾಕುಗಳಲ್ಲಿ ಬೀಜಗಳನ್ನು ಬಿತ್ತುವ ಮುನ್ನ ಪ್ರತಿ ಒಂದು ಕಿಲೋ ಬೀಜಕ್ಕೆ 10 ಗ್ರಾಂ ಇಮಿಡಾಕ್ಲೋಪ್ರಿಡ್ 70 ಡಬ್ಲ್ಯೂ. ಎಸ್. ಕೀಟನಾಶಕದ ಜೊತೆಗೆ 4 ಗ್ರಾಂ ಟ್ರೈಕೋಡರ್ಮ ವಿರಿಡೆ ಜೈವಿಕ ಶಿಲಿಂದ್ರನಾಶಕದಿAದ ಬೀಜೋಪಚಾರ ಮಾಡಿ ಬಿತ್ತಲಾಗಿದೆ ಎಂದರು.
ಭರಮಗೌಡ ರಾಯನಗೌಡ್ರ ಇವರು ತಮ್ಮ ಹೊಲದಲ್ಲಿ ಕೈಗೊಂಡ ಪ್ರಾತ್ಯಕ್ಷಿಕೆಯಲ್ಲಿ ಅಳವಡಿಸಿದ ವಿವಿಧ ತಂತ್ರಜಾನಗಳ ಕುರಿತು ವಿವರಿಸಿ, ತಮ್ಮ ಅನುಭವವನ್ನು ಹಂಚಿಕೊAಡರು. ಕ್ಷೇತ್ರೋತ್ಸವದಲ್ಲಿ ಗ್ರಾಮದ ಯುವಕರು ಮತ್ತು ಪ್ರಗತಿಪರ ರೈತರು ಉಪಸ್ಥಿತರಿದ್ದರು.
ರಸ ಹೀರುವ ಕೀಟಗಳನ್ನು ನಿರ್ವಹಣೆ ಮಾಡಲು ಹಳದಿ ಹಾಗೂ ನೀಲಿ ಅಂಟು ಬಲೆಗಳನ್ನು ಹಾಕುವುದರ ಜೊತೆಗೆ ಜೈವಿಕ ಕೀಟನಾಶಕಗಳಾದ ಲೇಖಾನಿಸಿಲಿಯಮ್ ಲೇಖಾನಿ ಹಾಗೂ ಬೆವೆರಿಯಾ ಬಾಸಿಯಾನಾವನ್ನು ಪ್ರತಿ ಲೀಟರ ನೀರಿಗೆ ತಲಾ 5 ಗ್ರಾಂನAತೆ ಬೆರಸಿ ಸಿಂಪಡಿಸಲಾಗಿದೆ. ಇದರಿಂದ ಥ್ರಿಪ್ಸ್ ನುಶಿ ಹಾಗೂ ಜೇಡರ ನುಶಿಗಳ ಬಾಧೆ ಕಡಿಮೆಯಾಗಿದೆ. ಗೋವಿನ ಜೋಳವನ್ನು ಬದು ಬೆಳೆಯಾಗಿ ಹಾಗೂ ಪ್ರತಿ ೧೬ ಮೆಣಸಿನ ಸಾಲುಗಳಿಗೆ ಒಂದು ಸಾಲು ಚಂಡು ಹೂವಿನ ಸಸಿಗಳನ್ನು ಬಲೆ ಬೆಳೆಯಾಗಿ ಬೆಳೆಸಲಾಗಿದೆ. ಇದರಿಂದ ಮುಟುರು ರೋಗ ಹಾಗೂ ಕೀಟಗಳ ಬಾಧೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಹೇಮಾವತಿ ಹಿರೇಗೌಡರ ತಿಳಿಸಿದರು.