ಮೊಟ್ಟೆ ಸಸ್ಯಾಹಾರವೋ ಮಾಂಸಾಹಾರವೋ ಎಂಬ ಪ್ರಶ್ನೆ ನಾವು ಚಿಕ್ಕವರಾಗಿನಿಂದ ಇರುವ ಬಹು ದೊಡ್ಡ ಪ್ರಶ್ನೆ ಆಗಿದೆ. ಇದರ ಬಗ್ಗೆ ಎಲ್ಲರೂ ತಮ್ಮದೇ ಆದ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಕೆಲವರು ಕೋಳಿ ಮೊಟ್ಟೆ ಇಡುವುದರಿಂದ ಅದು ಮಾಂಸಹಾರ ಎಂದು ಹೇಳಿದರೆ, ಇನ್ನು ಕೆಲವರು ಹಾಗಿದ್ರೆ ಹಸು ಕೂಡ ಒಂದು ಪ್ರಾಣಿ , ಅದರ ಹಾಲು ಕೂಡ ಮಾಂಸಹಾರವಾಗಬೇಕಿತ್ತಲ್ಲ ಮತ್ತೆ ಏಕೆ ಆಗಿಲ್ಲ? ಎಂಬ ಮರು ಪ್ರಶ್ನೆ ಕೇಳುತ್ತಾರೆ. ಹಾಗೇ ಕೋಳಿ ಮೊಟ್ಟೆ ಕೂಡ ಮಾಂಸಾಹಾರವಲ್ಲ ಎಂದು ವಾದ ಮಾಡುತ್ತಾರೆ. ಹಾಗಿದ್ರೆ ಕೋಳಿ ಮೊಟ್ಟೆ ಸಸ್ಯಹಾರಿಯೇ ಅಥವಾ ಮಾಂಸಾಹಾರಿಯೇ? ಎಂಬ ಬಗೆಹರಿಸದ ಪ್ರಶ್ನೆಗೆ ಉತ್ತರವನ್ನು ಇಲ್ಲಿ ತಿಳಿಯೋಣ.
ಎಸ್, ಮೊಟ್ಟೆ ಸಸ್ಯಾಹಾರಿಯೇ ಅಥವಾ ಮಾಂಸಾಹಾರಿಯೇ ಎಂಬ ಪ್ರಶ್ನೆಗೆ ವಿಜ್ಞಾನಿಗಳು ಉತ್ತರವನ್ನು ಕಂಡುಕೊಂಡಿದ್ದಾರೆ. ಈ ಹಿಂದೆ ವಿಜ್ಞಾನಿಗಳು ಮೊದಲು ಕೋಳಿನಾ? ಅಥವಾ ಮೊಟ್ಟೆಯಾ? ಎಂಬ ಪ್ರಶ್ನೆಗೆ ಉತ್ತರ ಕಂಡುಹಿಡಿದಿದ್ದರು. ಮೊದಲು ಕೋಳಿ ಜಗತ್ತಿಗೆ ಬಂತು ಆ ನಂತರ ಮೊಟ್ಟೆ ಬಂದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅಂತೆಯೇ ಈಗ ಈ ಪ್ರಶ್ನೆಗೆ ಉತ್ತರವೂ ಸಿಕ್ಕಿದೆ.
ಮೊಟ್ಟೆಗಳನ್ನು ಕೋಳಿಗಳು ಇಡುತ್ತವೆ. ಆದ್ದರಿಂದ ಅವು ಮಾಂಸಾಹಾರಿ ಎಂದು ಕೆಲವರು ಹೇಳುತ್ತಾರೆ. ಆದರೆ ಈಗ ವಿಜ್ಞಾನಿಗಳು ಇದಕ್ಕೆ ಸ್ಪಷ್ಟ ಉತ್ತರವನ್ನು ಕಂಡುಕೊಂಡಿದ್ದಾರೆ. ಇದನ್ನು ಸಾಬೀತುಪಡಿಸಲು, ವಿಜ್ಞಾನಿಗಳು ಒಂದು ಸಿದ್ಧಾಂತವನ್ನು ಸಹ ರೂಪಿಸಿದ್ದಾರೆ.
ಸಸ್ಯಾಹಾರಿಗಳು, ಕೋಳಿ ಮೊಟ್ಟೆಗಳನ್ನು ಇಡುತ್ತದೆ. ಆದ್ದರಿಂದ ಅದು ಮಾಂಸಾಹಾರಿ ಎನ್ನುತ್ತಾರೆ. ಇದು ತಪ್ಪು ಎಂದು ಸಾಬೀತುಪಡಿಸಲು, ವಿಜ್ಞಾನಿಗಳು ಹಾಲು ಪ್ರಾಣಿಗಳಿಂದಲೂ ಬರುತ್ತದೆ ಎಂದು ವಾದಿಸಿದ್ದಾರೆ. ಹಾಗಾದರೆ ಅದು ಹೇಗೆ ಸಸ್ಯಾಹಾರವಾಯಿತು? ಎಂದಿದ್ದಾರೆ.
ಕೋಳಿ ಮೊಟ್ಟೆ ಇಡುವುದರಿಂದ ಮರಿಗಳಾಗಿ ಹೊರಬರುತ್ತದೆ. ಅದನ್ನು ಮಾಂಸಾಹಾರಿ ಎಂದು ಅನೇಕರು ಹೇಳುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ದೊರೆಯುವ ಮೊಟ್ಟೆಗಳೆಲ್ಲವೂ ಫಲವತ್ತಾಗದೆ ಇರುತ್ತವೆ. ಅಂದರೆ ಅದರಲ್ಲಿ ಮರಿಗಳು ಹುಟ್ಟುವುದಿಲ್ಲ.
ಇನ್ನು ಜನರ ಈ ಗೊಂದಲವನ್ನು ಹೋಗಲಾಡಿಸಲು, ವಿಜ್ಞಾನಿಗಳು ಈ ಪ್ರಶ್ನೆಗೆ ವಿಜ್ಞಾನದ ಮೂಲಕ ಉತ್ತರವನ್ನು ಕಂಡುಹಿಡಿಯಲು ಪ್ರಯತ್ನಿಸಿದ್ದಾರೆ. ಜನರು ಈ ತರ್ಕವನ್ನು ಒಪ್ಪಿಕೊಂಡರೆ, ಮೊಟ್ಟೆಯು ಸಸ್ಯಾಹಾರಿ ಎಂದೇ ಅವರು ಹೇಳುತ್ತಿದ್ದಾರೆ. ಮೊಟ್ಟೆಯೊಳಗೆ ಮೂರು ಪದರಗಳಿವೆ. ಮೊದಲ ಪದರವು ಸಿಪ್ಪೆ, ಎರಡನೇ ಪದರವು ಬಿಳಿ ಮತ್ತು ಮೂರನೇ ಪದರವು ಮೊಟ್ಟೆಯ ಹಳದಿ ಲೋಳೆಯಾಗಿದೆ.
ಮೊಟ್ಟೆಗಳ ಮೇಲೆ ಸಂಶೋಧನೆ ನಡೆಸಲಾಗಿದ್ದು, ಅದರ ಪ್ರಕಾರ ಪ್ರಾಣಿಗಳಿಗೆ ಸಂಬಂಧಿಸಿದ ಯಾವುದೇ ಅಂಶವು ಮೊಟ್ಟೆಯ ಬಿಳಿಭಾಗದಲ್ಲಿ ಕಂಡುಬಂದಿಲ್ಲ. ಆದರೆ ಅದರ ಬದಲಾಗಿ ಪ್ರೋಟೀನ್ ಇದೆ. ಆದ್ದರಿಂದ, ತಾಂತ್ರಿಕವಾಗಿ ಹೇಳುವುದಾದರೆ, ಮೊಟ್ಟೆಯ ಬಿಳಿ ಭಾಗವು ಸಸ್ಯಾಹಾರಿಯಾಗಿದೆ. ಮೊಟ್ಟೆಯ ಬಿಳಿಯಲ್ಲಿ ಪ್ರೋಟೀನ್ ಇರುವಂತೆಯೇ, ಹಳದಿ ಲೋಳೆಯಲ್ಲಿಯೂ ಪ್ರೋಟೀನ್ ಕಂಡುಬರುತ್ತದೆ. ಇದಲ್ಲದೆ, ಕೊಲೆಸ್ಟ್ರಾಲ್ ಮತ್ತು ಕೊಬ್ಬು ಸಹ ಕಂಡುಬರುತ್ತದೆ.
ಕೋಳಿ ಮತ್ತು ಹುಂಜ ಸಂಪರ್ಕಕ್ಕೆ ಬಂದಾಗ, ಮೊಟ್ಟೆ ಮರಿಯಾಗುತ್ತದೆ. ಇವುಗಳಲ್ಲಿ ಗ್ಯಾಮೆಟ್ ಕೋಶಗಳು ಕಂಡುಬರುತ್ತವೆ, ಇದು ಮೊಟ್ಟೆಯನ್ನು ಮಾಂಸಾಹಾರಿಯನ್ನಾಗಿ ಮಾಡುತ್ತದೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಮೊಟ್ಟೆಗಳಲ್ಲಿ ಹೀಗಾಗುವುದಿಲ್ಲ. ಕೋಳಿಗಳು ಆರು ತಿಂಗಳ ನಂತರ ಮೊಟ್ಟೆಗಳನ್ನು ಇಡಲು ಪ್ರಾರಂಭಿಸುತ್ತವೆ. ಒಂದು ಅಥವಾ ಒಂದೂವರೆ ದಿನಗಳಲ್ಲಿ ಮೊಟ್ಟೆಗಳನ್ನು ಮರಿ ಮಾಡುತ್ತವೆ.
ಹುಂಜದ ಸಂಪರ್ಕಕ್ಕೆ ಬರದೆ ಮೊಟ್ಟೆ ಇಡುವ ಕೋಳಿಗಳನ್ನು unfertilized eggs ಎಂದು ಕರೆಯಲಾಗುತ್ತದೆ. ಈ ಮೊಟ್ಟೆಗಳಿಂದ ಮರಿಗಳು ಹೊರಬರಲು ಸಾಧ್ಯವಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಹಾಗಾಗಿ ಮಾರುಕಟ್ಟೆಯಲ್ಲಿ ಸಿಗುವ ಮೊಟ್ಟೆಗಳನ್ನು ಸಸ್ಯಾಹಾರಿ ವರ್ಗದಲ್ಲಿ ಇಡಬಹುದು ಕಂಡುಬರುತ್ತದೆ ಎಂದು ಅವರು ವಾದಿಸಿದ್ದಾರೆ.