ಲಂಚದ ಹಣ ನುಂಗಿ ಭಂಡತನ ಮೆರೆದ ಅಧಿಕಾರಿ: ವಾಂತಿ ಮಾಡಿಸಿ ಕಕ್ಕಿಸಿದ “ಲೋಕಾ” ಪೊಲೀಸ್!

0
29062016-Bangalore- Lokayukta Offce at MS building complex in the city on Monday. Photo: Shashidhar. B
Spread the love

ಕೊಪ್ಪಳ:- ಲಂಚದ ಹಣ ನುಂಗಿ ಭಂಡತನ ಮೆರೆದ ಅಧಿಕಾರಿಗೆ ವಾಂತಿ ಮಾಡಿಸಿ ಲೋಕಾಯುಕ್ತ ಪೊಲೀಸರು ತಕ್ಕ ಪಾಠ ಕಲಿಸಿರುವ ಘಟನೆ ಕೊಪ್ಪಳದಲ್ಲಿ ಜರುಗಿದೆ.

Advertisement

ಕೊಪ್ಪಳ ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕ ‘ಅಲಿ’ ಲೋಕಾ ಬಲೆಗೆ ಬಿದ್ದ ಅಧಿಕಾರಿ. ಎನ್​ಜಿಓಗೆ ಪ್ರಮಾಣ ಪತ್ರ ನೀಡಲು ಭೀಮನಗೌಡ ಅನ್ನೋರಿಗೆ ದಸ್ತಗಿರ್ ಅಲಿ ಎರಡು ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಭೀಮನಗೌಡ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಇಂದು ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಕೊಪ್ಪಳ ನಗರದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಕಚೇರಿಯಲ್ಲಿ ದಸ್ತಗಿರ್ ಅಲಿಯನ್ನು ಟ್ರ್ಯಾಪ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಲೋಕಾಯುಕ್ತ ಪೊಲೀಸರ ಬಲೆಗೆ ಬೀಳ್ತಿದ್ದಂತೆ ದಸ್ತಗಿರ್ ಅಲಿ ಹೈಡ್ರಾಮಾವೇ ಮಾಡಿದ್ದಾರೆ. ಲಂಚ ಪಡೆದಿದ್ದ ಎರಡು ಸಾವಿರ ರೂಪಾಯಿ ನೋಟನ್ನು ನುಂಗಿ ಸಾಕ್ಷಿನಾಶ ಮಾಡಲು ಯತ್ನಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ನೀರು ಕುಡಿಸಿ ವಾಂತಿ ಮಾಡಿಸಿ, ಹಣ ಹೊರಗೆ ತೆಗೆಸಿದ್ದಾರೆ.

ಸದ್ಯ ದಸ್ತಗಿರ್ ಅಲಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here