ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಗ್ರಾಮೀಣ ಭಾಗದ ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿಸುವ ಉದ್ದೇಶದಿಂದ ಪ್ರಾರಂಭಗೊಂಡು ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿನ ಸಾಲ ಸೌಲಭ್ಯವನ್ನು ರೈತರು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಕೋಟುಮಚಗಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ ಕುಲಕರ್ಣಿ ಹೇಳಿದರು.
ಸಮೀಪದ ಕೋಟುಮಚಗಿ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘ-೨ರಲ್ಲಿ ಶುಕ್ರವಾರ ಸಂಘದ ಸದಸ್ಯರಿಗೆ ಟ್ರಾö್ಯಕ್ಟರ್ ಸಾಲ ಮಂಜೂರಾತಿ ಪತ್ರ ನೀಡಿ ಅವರು ಮಾತನಾಡಿದರು.
ನಾನಾ ಯೋಜನೆಯಡಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಟ್ರ್ಯಾಕ್ಟರ್ ಸಾಲ, ಗೃಹಬಳಕೆ ಸಾಲ, ವ್ಯಾಪಾರಕ್ಕಾಗಿ ಸಾಲ, ಹೈನುಗಾರಿಕೆ ಅಲ್ಲದೆ ಇನ್ನಿತರ ವ್ಯಾಪರಸ್ಥರಿಗೆ ಅಗತ್ಯಕ್ಕನುಗುಣವಾಗಿ ಸಾಲವನ್ನು ಪ್ರಾಥಮಿಕ ಕೃಷಿ ಸಾಲ ಸಂಘಗಳ ಮೂಲಕ ನೀಡಲಾಗುತ್ತಿದೆ. ಇದು ಸಾಲ ಮತ್ತು ಆರ್ಥಿಕ ಸೇವೆಗಳ ಹೊರತಾಗಿ ರೈತರಿಗೆ ಮತ್ತು ಗ್ರಾಮೀಣ ಕೃಷಿ ಸಮುದಾಯಗಳಿಗೆ ಬಹು ಸೇವೆಗಳನ್ನು ಒದಗಿಸುತ್ತಿದೆ. ಪ್ರಾಥಮಿಕ ಕೃಷಿ ಸಾಲ ಸಂಘಗಳನ್ನು ಬಲಪಡಿಸುವ ಮೂಲಕ ಕೃಷಿ ಸ್ಥಿತಿಯನ್ನು ಸುಧಾರಿಸಲು, ಗ್ರಾಮೀಣ ಸಮುದಾಯಗಳನ್ನು ಉನ್ನತೀಕರಿಸಲು ಮತ್ತು ಅಂತರ್ಗತ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಲಾಗಿದೆ. ಈ ಪ್ರಯತ್ನಗಳು ಬಡತನ ಕಡಿತ, ಆಹಾರ ಭದ್ರತೆ ಮತ್ತು ಕೃಷಿ ಆರ್ಥಿಕತೆಗಳಲ್ಲಿ ಸುಸ್ಥಿರ ಅಭಿವೃದ್ಧಿಗೆ ಕೊಡುಗೆ ನೀಡಬಹುದಾಗಿದೆ ಎಂದರು.
ಸAಘದ ನಿರ್ದೇಶಕರಾದ ಪ್ರಕಾಶ ಮುಧೋಳ, ಈರಣ್ಣ ನೇಗಲಿ, ಬಸವರಾಜ ನವಲಗುಂದ, ಮಾರುತಿ ಪೂಜಾರ, ಮಲ್ಲಪ್ಪ ಇಬ್ರಾಹಿಂಪೂರ, ಚನ್ನಬಸನಗೌಡ ಸಂಕನಗೌಡ್ರ, ವೆಂಕಟೇಶ ಗೌಡರ ಇದ್ದರು. ವ್ಯವಸ್ಥಾಪಕ ಲೋಕೇಶ ಸಂಕನಗೌಡ್ರ ನಿರ್ವಹಿಸಿದರು.