ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ವಿಧಾನ ಸೌಧದ ಅಧಿವೇಶನದಲ್ಲಿ ಸಚಿವೆ ಲಕ್ಷಿö್ಮÃ ಹೆಬ್ಬಾಳ್ಕರ್ ಅವರನ್ನು ಆಕ್ಷೇಪಾರ್ಹ ಪದಗಳಿಂದ ನಿಂದಿಸಿದ ಸಿ.ಟಿ. ರವಿಯವರ ವಿಧಾನ ಪರಿಷತ್ ಸದಸ್ಯತ್ವವನ್ನು ತಕ್ಷಣವೇ ರದ್ದುಪಡಿಸಬೇಕು, ಮಹಿಳೆಯರ ಜೊತೆ ಅಗೌರವದಿಂದ ವರ್ತಿಸಿದ ಅನರ್ಹರಿಗೆ ವಿಧಾನ ಸೌಧ ಪ್ರವೇಶಿಸಲು ಅವಕಾಶ ನೀಡಬಾರದು, ಮಹಿಳೆಯನ್ನು ದೇವಿ ದೇವತೆ ಎಂದು ಪೂಜಿಸುವ ನಾಡಿನಲ್ಲಿ ಮಹಿಳೆಯರ ಬಗ್ಗೆ ಕನಿಷ್ಟ ಗೌರವವೂ ಇಲ್ಲದಂತೆ ನಾಲಗೆ ಹರಿಯಬಿಟ್ಟ ಸಿಟಿ ರವಿ ವಿರುದ್ಧ ಸಭಾಧ್ಯಕ್ಷರು ಸೂಕ್ತ ಕ್ರಮ ಜರಗಿಸಬೇಕೆಂದು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ಕರ್ನಾಟಕ ರಾಜ್ಯ ಮಹಿಳಾ ವಿಭಾಗದ ಅಧ್ಯಕ್ಷೆ ಸಬೀಹಾ ಪಟೇಲ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಂತಹ ಹೇಯ ನಡವಳಿಕೆಯನ್ನು ಖಂಡಿಸುವ ಬದಲು ಕೆಲವರು ಸಮರ್ಥನೆಗಿಳಿದಿರುವುದು ಆತಂಕಕಾರಿ ವಿಚಾರವಾಗಿದೆ. ಇದು ಮಹಿಳೆಯರ ಉತ್ಸಾಹವನ್ನು ಕುಗ್ಗಿಸಿ ಅವರು ರಾಜಕೀಯದಲ್ಲಿ ಮುಂದುವರಿಯದಂತೆ ತಡೆಯುವ ಹುನ್ನಾರವಾಗಿದೆ. ಮಹಿಳೆಯರ ಹಕ್ಕುಗಳ ಬಗ್ಗೆ, ಮಹಿಳೆಯರ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಬಿಜೆಪಿಗರು ಈ ಬಗ್ಗೆ ಯಾಕೆ ಮೌನ ತಾಳಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ.