ಮಿಸ್ ಆಗಿ ದೇವಸ್ಥಾನದ ಹುಂಡಿಗೆ ಭಾರೀ ಬೆಲೆಯುಳ್ಳ ಐಫೋನ್ ಬಿದ್ದಿದ್ದು, ಯುವಕ ಕಂಗಾಲಾಗಿದ್ದಾನೆ. ಬಳಿಕ ಫೋನ್ ವಾಪಸ್ ಕೊಡುವಂತೆ ಪಟ್ಟು ಹಿಡಿದಿದ್ದು, ಆಡಳಿತ ಮಂಡಳಿ ನೋ ಎಂದು ಹೇಳಿದೆ. ಈ ಘಟನೆ ತಮಿಳುನಾಡಿನಲ್ಲಿ ಜರುಗಿದೆ. ವಿನಾಯಕಪುರಂ ನಿವಾಸಿ ದಿನೇಶ್ ಚೆನ್ನೈನ ತಿರು ಪೋರೂರಿನ ಕಂದಸ್ವಾಮಿ ದೇಗುಲಕ್ಕೆ ಕಳೆದ ತಿಂಗಳು ಭೇಟಿ ನೀಡಿದ್ದರು.
ಈ ವೇಳೆ ಹುಂಡಿಗೆ ಹಣ ಹಾಕುವ ಸಂದರ್ಭದಲ್ಲಿ ಆಕಸ್ಮಿಕ ಐಫೋನ್ ಕೂಡ ಹುಂಡಿಗೆ ಬಿದ್ದಿತ್ತು. ದೇವಸ್ಥಾನ ಆಡಳಿತ ಮಂಡಳಿಯವರನನ್ನ ಕೇಳಿದಾಗ ಹುಂಡಿಗೆ ಹಾಕಿದ ಮೇಲೆ ಮರಳಿಸುವುದಿಲ್ಲ ಎಂದಿದ್ದಾರೆ. ಈ ಕುರಿತು ದಿನೇಶ್ ಅಧಿಕಾರಿಗಳಿಗೆ ದೂರು ನೀಡಿದ್ದು, ಶುಕ್ರವಾರ ರಂದು ಅಧಿಕಾರಿಗಳು ಹುಂಡಿ ಓಪನ್ ಮಾಡಿಸಿದ್ದಾರೆ.
ಈ ವೇಳೆ ಐಫೋನ್ ಕೂಡ ಸಿಕ್ಕಿದೆ. ಆದರೆ ದೇವಸ್ಥಾನದವರು ಮೊಬೈಲ್ನಲ್ಲಿರುವ ಡೇಟಾವನ್ನು ಕೊಡುತ್ತೇವೆ. ಐಫೋನ್ ನೀಡುವುದಿಲ್ಲ. ಹುಂಡಿಗೆ ಬಿದ್ದ ಬಳಿಕ ಅದು ದೇಗುಲದ ಆಸ್ತಿ ಎಂದು ಫೋನ್ ಕೊಡಲು ನಿರಾಕರಿಸಿದ್ದಾರೆ.ಐಫೋನ್ ಬೇಕು ಎಂದಿರುವ ದಿನೇಶ್, ಡೇಟಾ ಮಾತ್ರ ಸ್ವೀಕಾರ ಮಾಡಲು ನಿರಾಕರಿಸಿ, ಬರಿಗೈಯಲ್ಲಿ ವಾಪಾಸ್ ಹೋಗಿರುವ ಘಟನೆ ನಡೆದಿದೆ