ನೇಕಾರರ ಬದುಕು ಸುಧಾರಣೆಯಾಗಲಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚಿನ ದಿನಗಳಲ್ಲಿ ನೇಕಾರಿಕೆಯು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ನೇಕಾರರ ಜೀವನ ಸಂಕಷ್ಟಮಯವಾಗಿದೆ. ನೇಕಾರಿಕೆ ವೃತ್ತಿಗೆ ಸರಕಾರ ಆರ್ಥಿಕ ಭದ್ರತೆ ನೀಡುವ ಅವಶ್ಯಕತೆ ಇದೆ ಎಂದು ಗದಗ-ಬೆಟಗೇರಿ ನೇಕಾರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಬೆಲ್ಲದ ಹೇಳಿದರು.

Advertisement

ಅವರು ಶನಿವಾರ ಸಂಘದ ಕಾರ್ಯಾಲಯದಲ್ಲಿ ೨೦೨೫ನೇ ವರ್ಷದ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ನೇಕಾರರ ಬದುಕು ಹಾಗೂ ನೇಯ್ಗೆ ಸಮುದಾಯದ ಸಾಮಾಜಿಕ, ಆರ್ಥಿಕ ಆಯಾಮ ಹಾಗೂ ಸ್ಥಿತಿ-ಗತಿಗಳತ್ತ ನಾವೆಲ್ಲರೂ ಗಮನ ಹರಿಸಿ ಅವರ ಆರ್ಥಿಕ ಸದೃಢತೆಯತ್ತ ನಮ್ಮೆಲ್ಲರ ಚಿತ್ತವಿರಲಿ ಎಂದರು.

ಸAಘದ ಉಪಾಧ್ಯಕ್ಷ ವಿಜಯಕುಮಾರ ಕಬಾಡಿ ಮಾತನಾಡಿ, ನೇಕಾರರ ಪತ್ತಿನ ಸಹಕಾರ ಸಂಘ ಹಾಗೂ ಸರ್ಕಾರದಿಂದ ನೇಕಾರರಿಗೆ ಲಭ್ಯವಿರುವ ಸೌಲಭ್ಯವನ್ನು ಪಡೆದುಕೊಂಡು ನೇಕಾರರು ಆರ್ಥಿಕವಾಗಿ ಸುಧಾರಿಸಿಕೊಳ್ಳಲಿ ಎಂದರು.

ಸಂಘದ ನಿರ್ದೆಶಕರಾದ ವ್ಹಿ.ಕೆ. ಗುರುಮಠ, ಚನ್ನವೀರಪ್ಪ ಚನ್ನಪ್ಪನವರ ಮಾತನಾಡಿ, ಭಾರತದಲ್ಲಿ ಕೈಮಗ್ಗ ಮತ್ತು ವಸ್ತ್ರೋದ್ಯಮ ಒಂದು ಪ್ರಾಚೀನ ಸಂಪ್ರದಾಯದ ಪ್ರತಿಬಿಂಬವಾಗಿದೆ. ಈ ಕಲೆ ಹಾಗೂ ನೇಕಾರರು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತಾರೆ. ನೇಕಾರಿಕೆ ಉಳಿದು ಮುಂದಿನ ಪೀಳಿಗೆಗೆ ಬಳುವಳಿಯಾಗಿ ಮುನ್ನಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ನಿರ್ದೆಶಕರಾದ ಸುಭಾಸ ಗಂಜಿ, ಮೋಹನಸಾ ರಾಯಭಾಗಿ, ವೀರಭದ್ರಪ್ಪ ಗಂಜಿ, ಅನಿಲ ಗಡ್ಡಿ, ಅಮರೇಶ ಚಾಗಿ, ನಾಮದೇವ ಸೂರೆ, ಮೈಲಾರಪ್ಪ ಅರಣಿ, ವಿಷ್ಣು ಪಾಸ್ತೆ, ವೀಣಾ ನೀಲಗುಂದ, ಶೈಲಾ ಹೆಬ್ಬಳ್ಳಿ, ಮುಖ್ಯ ಕಾರ್ಯ ನಿರ್ವಾಹಕರಾದ ಪ್ರಭು ನೀಲಗುಂದ ಹಾಗೂ ಸಿಬ್ಬಂದಿ ವೀರೇಶ ಕುಂಬಾರ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here