ಫೇಕ್ ಅಭಿಮಾನಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಅಲ್ಲು ಅರ್ಜುನ್

0
Spread the love

ಪುಷ್ಪ 2 ರಿಲೀಸ್ ಸಂದರ್ಭದಲ್ಲಿ ಕಾಲ್ತುಳಿತದಿಂದ ಮಹಿಳೆ ಮೃತಪಟ್ಟ ಘಟನೆಯ ಬಳಿಕ ಪೊಲೀಸರು ನಟ ಅಲ್ಲು ಅರ್ಜುನ್ ಅವರನ್ನು ಬಂಧಿಸಿದ ಬಳಿಕ  ಬಿಡುಗಡೆ ಮಾಡಿದ್ದರು. ಘಟನೆಯ ಬಳಿಕ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹಾಗೂ ಅಲ್ಲು ಅರ್ಜುನ್ ವಾಕ್ಸಮರದ ಹಿನ್ನೆಲೆ ನಟನಿಗೆ ಫೇಕ್ ಐಡಿ, ಫೇಕ್ ಪ್ರೊಪೈಲ್‌ಗಳ ಕಾಟ ಶುರುವಾಗಿದೆ. ಹಾಗಾಗಿ ಅಭಿಮಾನದ ಹೆಸರಿನಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡುವವರಿಗೆ ಅಲ್ಲು ಅರ್ಜುನ್ ವಾರ್ನಿಂಗ್ ನೀಡಿದ್ದಾರೆ.

Advertisement

ನಿಮ್ಮ ಭಾವನೆಗಳನ್ನು ಜವಾಬ್ದಾರಿಯುತವಾಗಿ ವ್ಯಕ್ತಪಡಿಸಬೇಕು ಎಂದು ನಾನು ನನ್ನ ಅಭಿಮಾನಿಗಳಿಗೆ ಮನವಿ ಮಾಡುತ್ತೇನೆ. ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಯಾವುದೇ ರೀತಿಯ ಇನ್ನೊಬ್ಬರಿಗೆ ನೋವು ಆಗುವ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಬೇಡಿ ಎಂದು ಅಲ್ಲು ಅರ್ಜುನ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಫೇಕ್ ಐಡಿ ಹಾಗೂ ಫೇಕ್ ಸೋಷಿಯಲ್ ಮೀಡಿಯಾ ಖಾತೆಗಳನ್ನು ಬಳಸಿ ನನ್ನ ಅಭಿಮಾನಿಗಳು ಎಂದು ಹೇಳುತ್ತಾ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅಂತಹ ಪೋಸ್ಟ್‌ಗಳನ್ನು ಮಾಡಬೇಡಿ ಎಂದು ಅಭಿಮಾನಿಗಳಿಗೆ ಕೇಳಿಕೊಳ್ಳುತ್ತೇನೆ ಎಂದು ಅಲ್ಲು ಅರ್ಜುನ್ ಮನವಿ ಮಾಡಿದ್ದಾರೆ.

‘ಪುಷ್ಪ 2’ ಪ್ರದರ್ಶನಕ್ಕೆ ಅಲ್ಲು ಅರ್ಜುನ್ ಪ್ರಿಮಿಯರ್ ಶೋ ನೋಡಲು ಬಂದ ವೇಳೆ, ಕಾಲ್ತುಳಿತದಿಂದ ಮಹಿಳೆಯೊಬ್ಬರು ಸಾವನಪ್ಪಿದ್ದರು. ಇದಕ್ಕೆ ಅಲ್ಲು ಅರ್ಜುನ್ ಅವರೇ ಕಾರಣ ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಆರೋಪಿಸಿದ್ದರು. ಈ ಬೆನ್ನಲ್ಲೇ ಕಿಡಿಗೇಡಿಗಳ ಫೇಕ್ ಐಡಿ ಮತ್ತು ಪ್ರೊಪೈಲ್‌ಗಳ ಕ್ರಿಯೇಟ್ ಮಾಡಿರುವ ಹಿನ್ನೆಲೆ ಅಲ್ಲು ಅರ್ಜುನ್ ಖಡಕ್ ವಾರ್ನಿಂಗ್ ನೀಡಿದ್ದಾರೆ.


Spread the love

LEAVE A REPLY

Please enter your comment!
Please enter your name here