ಬಳ್ಳಾರಿ: ಮನೆಯಿಂದ ದೂರವಾಗಿ 25 ವರ್ಷಗಳ ಬಳಿಕ ಮಹಿಳೆ ಪತ್ತೆಯಾಗಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಬಳ್ಳಾರಿ ಮೂಲದ ಸಾಕಮ್ಮ ಪತ್ತೆಯಾದ ಮಹಿಳೆಯಾಗಿದ್ದು, 25 ವರ್ಷಗಳ ಹಿಂದೆ ಮನೆಯಿಂದ ಹೊಸಪೇಟೆ ರೈಲು ನಿಲ್ದಾಣಕ್ಕೆ ಹೋದಾಕೆ ಮರಳಿ ಮನೆಗೆ ಬಂದಿರಲಿಲ್ಲ. ಎಲ್ಲ ಕಡೆ ಹುಡುಕಾಡಿದ್ದ ಕುಟುಂಬಸ್ಥರು ಕೊನೆಗೆ ಮೃತಮಟ್ಟಿದ್ದಾಳೆಂದು ಭಾವಿಸಿ ತಿಥಿ ಕಾರ್ಯವನ್ನು ಸಹ ಮಾಡಿದ್ದರು. ಆದರೆ ಇಪ್ಪತ್ತೈದು ವರ್ಷಗಳ ಬಳಿಕ ದೂರದ ಚಂಢಿಗಡದ ಅನಾಥಾಶ್ರಮವೊಂದರಲ್ಲಿ ಇರುವುದು ಗೊತ್ತಾಗಿದೆ.
ಇಪ್ಪತ್ತೈದು ವರ್ಷಗಳ ಹಿಂದೆ ಹೊಸಪೇಟೆ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾರೆ. ಎಲ್ಲಿಗೋ ತೆರಳಬೇಕಿದ್ದ ಸಾಕಮ್ಮ. ಆಕಸ್ಮಿಕವಾಗಿ ಹೊಸಪೇಟೆಯಿಂದ ಚಂಢಿಗಡಕ್ಕೆ ಹೊರಡುವ ಟ್ರೈನ್ ಹತ್ತಿದ್ದಾಳೆ. ಹೀಗೆ ದೂರದ ಚಂಢಿಗಡ ಹೋಗಿದ್ದ ಸಾಕಮ್ಮ ಮರಳಿ ಹೊಸಪೇಟೆಗೆ ಬರಲು ಗೊತ್ತಾಗದೆ. ಹಣವೂ ಇಲ್ಲದೆ ಅಲ್ಲೆ ಅಲೆದಾಡಿದ್ದಾಳೆ. ಕೊನೆಗೆ ಚಂಢಿಗಡದ ಮಂಡಿ ಜಿಲ್ಲೆಯ ಅನಾಥಾಶ್ರಮವೊಂದರಲ್ಲಿ ನೆಲೆಯೂರಿದ್ದರು.
ಬಳ್ಳಾರಿ ಮೂಲದ ಸಾಕಮ್ಮ ಎಂಬಾಕೆ ಅನಾಥಾಶ್ರಮದಲ್ಲಿ ನೆಲೆಯೂರಿರುವ ಬಗ್ಗೆ ಮಂಡ್ಯ ಮೂಲದ ಐಪಿಎಸ್ ಅಧಿಕಾರಿಯೊಬ್ಬರಿಗೆ ಮಾಹಿತಿ ಲಭಿಸಿದ. ಈ ಬಗ್ಗೆ ಕರ್ನಾಟಕ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯಾಗಿರುವ ಕ್ಯಾಪ್ಟನ್ ಮಣಿವಣ್ಣನ್ ಅವರಿಗೆ ಬಳ್ಳಾರಿ ಮೂಲದ ಅಜ್ಜಿಯ ಬಗ್ಗೆ ಮಾಹಿತಿ ನೀಡಿದ್ದರು.
ಕ್ಯಾ.ಮಣಿವಣ್ಣನ್ ಅವರ ನಿರ್ದೇಶನದ ಮೇರೆಗೆ ಬಳ್ಳಾರಿ ಅಧಿಕಾರಿಗಳ ತಂಡ ಚಂಢಿಗಡದ ಮಂಡಿ ಜಿಲ್ಲೆಯಲ್ಲಿನ ಅನಾಥಾಶ್ರಮಕ್ಕೆ ಭೇಟಿ ನೀಡಿದ್ದಾರೆ. ಅಜ್ಜಿಯನ್ನ ವಿಚಾರಿಸಿರುವ ಅಧಿಕಾರಿಗಳ ತಂಡ. ಬಳ್ಳಾರಿ ಜಿಲ್ಲೆಯ ಕುಟುಂಬಸ್ಥರ ಕುರಿತು ಮಾಹಿತಿ ಕೇಳಿದ್ದಾರೆ. ಅನಂತರ ಅಲ್ಲಿಂದಲೇ ಬಳ್ಳಾರಿಯಲ್ಲಿರುವ ಮಕ್ಕಳಿಗೆ ಕರೆ ಮಾಡಿದ್ದಾರೆ. ತಾಯಿ ಜೀವಂತ ಇರುವುದು ತಿಳಿದು ಕಣ್ಣೀರು ಹಾಕಿದರು. ಅಧಿಕಾರಿಗಳ ಪ್ರಯತ್ನದಿಂದ ಸಾಕಮ್ಮ 25 ವರ್ಷಗಳ ಬಳಿಕ ಮನೆ ಸೇರುತ್ತಿದ್ದಾರೆ.