ಬೆಳಗಾವಿ: ಬೆಳಗಾವಿ ಚಳಿಗಾಲ ಅಧಿವೇಶನದ ವಿಧಾನಪರಿಷತ್ ಕಲಾಪದಲ್ಲಿ ಬಳಸಿದ್ದಾರೆ ಎನ್ನಲಾದ ಅಶ್ಲೀಲ ಪದಕ್ಕೆ ಸಂಬಂಧಿಸಿದ ವಿಡಿಯೋವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಿಡುಗಡೆ ಮಾಡಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ‘ರಾಹುಲ್ ಗಾಂಧಿ ಅವರನ್ನು ನೀವು (ಸಿಟಿ ರವಿ) ಡ್ರಗ್ ಅಡಿಕ್ಟ್ ಅಂದಿದ್ದಕ್ಕೆ ನಾನು ನಿಮ್ಮ ಬಳಿ ಮೂವರು ಮುಗ್ದ ಜನರನ್ನು ಅಪಘಾತ ಮಾಡಿ ಹತ್ಯೆ ಮಾಡಿದ್ದೀರಲ್ಲವೇ,
Advertisement
ನಿಮ್ಮನ್ನು ಕೊಲೆಗಾರ ಎನ್ನಲೇ ಎಂದಿದ್ದಕ್ಕೆ ತಾನೆ ನೀವು (ಸಿಟಿ ರವಿ) ನನಗೆ ಆ ಪದವನ್ನು ಬಳಸಿದ್ದು? ನೆನಪಿಲ್ಲವಾ? ಈಗೇನು ನಾಟಕ ಮಾಡುತ್ತಿದ್ದೀರಾ… ಅಬ್ಬ ಅಷ್ಟೊಂದು ದೊಡ್ಡ ಪಟ್ಟಿ ಕಟ್ಟಿಕೊಂಡು ನಾಟಕ ಮಾಡುತ್ತಿದ್ದೀರಾ? ನಿಮ್ಮನ್ನು ಮಹಿಳೆಯರು ಕ್ಷಮಿಸಲ್ಲ ಎಂದು ಹೆಬ್ಬಾಳ್ಕರ್ ಕಿಡಿ ಕಾರಿದ್ದಾರೆ.