ವಿಜಯಸಾಕ್ಷಿ ಸುದ್ದಿ, ಮುಳಗುಂದ: ನಾಡಿನ ರೈತರ ಬದುಕು ಹಸನಾದರೆ ದೇಶದ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ರೈತ ಸಂಘದ ಅಧ್ಯಕ್ಷ ದೇವರಾಜ ಸಂಗನಪೇಟಿ ಹೇಳಿದರು.
ಅವರು ಪಟ್ಟಣದ ಹಸಿರು ಸೇನೆ ರೈತ ಸಂಘಟನೆಯಿಂದ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಆಧುನಿಕತೆ ಬೆಳೆದಂತೆ ಕೃಷಿಯಲ್ಲಿ ಹತ್ತು ಹಲವಾರು ಬದಲಾವಣೆ ಕಂಡಿದೆ. ಸಾಕಷ್ಟು ಬೆಳೆಗಳಲ್ಲಿ ಬದಲಾವಣೆ ಮಾಡುತ್ತಾ ಹೆಚ್ಚು ಹೆಚ್ಚು ಬೆಳೆಗಳನ್ನು ಬೆಳೆದರೂ ಸೂಕ್ತ ಬೆಲೆ ಇಲ್ಲದೆ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಸರಕಾರ ರೈತರ ನೆರವಿಗೆ ಸೂಕ್ತ ಸಮಯದಲ್ಲಿ ಧಾವಿಸಿ ಸೂಕ್ತ ಬೆಲೆ ನಿಗದಿ ಸೇರಿದಂತೆ ಹತ್ತು ಹಲವಾರು ಯೋಜನೆಗಳ ಮೂಲಕ ರೈತರ ಆರ್ಥಿಕವಾಗಿ ಸದೃಢರನ್ನಾಗಿ ಮಾಡದೇ ಹೋದಲ್ಲಿ ರೈತರ ಬದುಕು ಸಂಕಷ್ಟಕ್ಕೆ ಹೋಗುತ್ತದೆ ಎಂದರು.
ಬಸವರಾಜ ಕರಿಗಾರ, ಕಿರಣ ಕುಲಕರ್ಣಿ, ಮಮ್ಮದಲಿ ಸೇಖ, ಗುಡುಸಾಬ ಗಾಡಿ, ಶಂಕ್ರಯ್ಯ ಹಿರೇಮಠ, ಮಾಹಾದೇವಪ್ಪ ಗಡಾದ, ಮುತ್ತು ಸುಂಕದ, ಚನ್ನಪ್ಪ ಹುಲ್ಲೂರ, ದತ್ತಣ್ಣ ಎಳವತ್ತಿ, ಮೋಹನ ಮದ್ದಿನ, ಮಂಜುನಾಥ ಕಬಾಡೆ, ಮಾಹಾಂತೇಶ ಗುಂಜಳ, ದೇವಪ್ಪ ಅಣ್ಣಗೇರಿ, ಯಲ್ಲಪ್ಪ ಮೋಕಾಶಿ, ಗಂಗಪ್ಪ ವಿಜಾಪೂರ, ಪಕ್ಕಣ್ಣ ಹುಲಕೋಟಿ, ಖಲಂದರ ಗಾಡಿ ಇದ್ದರು.