ಕಲಬುರ್ಗಿ:- ನಗರದ ಮೋಹನ್ ಲಾಡ್ಜ್ ಮುಂಭಾಗದ ಮುಖ್ಯ ರಸ್ತೆಯಲ್ಲಿ ವಿದ್ಯುತ್ ಅವಘಡ ಸಂಭವಿಸಿದೆ. ಶಾಲಾ ಬಸ್ಗೆ ಮಗುವನ್ನು ಹತ್ತಿಸುವಾಗ ವಿದ್ಯುತ್ ವೈಯರ್ ತಗುಲಿ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಭಾಗ್ಯಮ್ಮ ಗಂಭೀರವಾಗಿ ಗಾಯಗೊಂಡ ಮಹಿಳೆ ಎಂದು ಗುರುತಿಸಲಾಗಿದೆ.
ಕರೆಂಟ್ ಶಾಕ್ನಿಂದ ಗಂಭೀರವಾಗಿ ಗಾಯಗೊಂಡಿರುವ ಬಾಗ್ಯಶ್ರೀ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಗ್ಯಶ್ರೀ ಅವರು ಎಂದಿನಂತೆ ತಮ್ಮ ಬುದ್ಧಿಮಾಂದ್ಯ ಮಗನನ್ನ ಶಾಲೆಗೆ ಕಳುಹಿಸಲು ಶಾಲಾ ವಾಹನ ಹತ್ತಿಸಲು ಬಂದಿದ್ದರು. ಈ ವೇಳೆ ರಸ್ತೆಯಲ್ಲಿ ತುಂಡಾಗಿ ಬಿದ್ದಿದ್ದ ವೈರ್ ತಗುಲಿದೆ.
ನೋಡ ನೋಡುತ್ತಿದ್ದಂತೆ ಶಾಕ್ ಹೊಡೆದು ಭಾಗ್ಯಶ್ರೀ ಅವರು ರಸ್ತೆಯಲ್ಲಿ ಬಿದ್ದು ವಿಲವಿಲ ಒದ್ದಾಡುತ್ತಿದ್ದು, ಕೈ, ಕಾಲು, ಹೊಟ್ಟೆ ಭಾಗ ಸುಟ್ಟು ಹೋಗಿದೆ. ತಕ್ಷಣವೇ ಸ್ಥಳೀಯರು ಭಾಗ್ಯಶ್ರೀ ಅವರನ್ನು ಕಾಪಾಡಿದ್ದಾರೆ.
ಒಂದು ವೇಳೆ ಹೆಚ್ಚು ಕಡಿಮೆಯಾಗಿದ್ದರೂ ಶಾಲಾ ವಾಹನದಲ್ಲಿದ್ದ 11ಕ್ಕೂ ಹೆಚ್ಚು ಮಕ್ಕಳು ಸುಟ್ಟು ಭಸ್ಮವಾಗುತ್ತಿದ್ದರು. ಅದೃಷ್ಟವಶಾತ್ ಅಪಾಯ ಸಂಭವಿಸಿಲ್ಲ. ಭಾಗ್ಯಶ್ರೀ ಅವರು ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಅಲ್ಲದೇ, ಅವರ 11 ವರ್ಷ ಮಗ ಆಯುಷ್ಗೂ ಕೂಡಾ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರಿಗೂ ಚಿಕಿತ್ಸೆ ಕೊಡಿಸಲಾಗುತ್ತಿದೆ.