ಹುಬ್ಬಳ್ಳಿ; ಮನುಷ್ಯನಿಗೆ ನಾನೇನು ಎನ್ನುವ ಸ್ಪಷ್ಟತೆ ಇದ್ದರೆ ಸಾಕು ಆಣೆ ಪ್ರಮಾಣ ಅವಶ್ಯಕತೆ ಇಲ್ಲ ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮನುಷ್ಯನಿಗೆ ನಾನೇನು ಎನ್ನುವ ಸ್ಪಷ್ಟತೆ ಇದ್ದರೆ ಸಾಕು ಆಣೆ ಪ್ರಮಾಣ ಅವಶ್ಯಕತೆ ಇಲ್ಲ ಎಂದರು. ಇನ್ನೂ ಸುವರ್ಣಸೌಧದಲ್ಲಿ ಸಿಟಿ ವಿರುದ್ಧ ಬಹಳಷ್ಟು ಅಸಭ್ಯವಾಗಿ ಮಾತನಾಡಿದ್ದಾರೆ.ನಿನ್ನ ಹೆಣ ಪಾರ್ಸೆಲ್ ಮಾಡತ್ವಿ , ಯಾರು ಬಳಸ ಬಾರದು ಅಂತ ಕೆಟ್ಟ ಶಬ್ದಗಳ ಬಳಕೆ ಮಾಡಿದ್ದಾರೆ.
ಇದು ದುರ್ದೈವದ ಸಂಗತಿ ಇದರ ಜೊತೆಗೆಅಟ್ಯಾಕ್ ಮಾಡಿದವರು ಯಾರ ಪಿಎಗಳು, ಏನು ಇದು ಪಿಎಗಳ ಆಡಳಿತನಾ ಜಿಲ್ಲಾ ಉಸ್ತುವಾರಿ, ಗೃಹ ಸಚಿವರಿಗೆ ಗೊತ್ತಿಲ್ಲದೆ ಇದನ್ನು ಮಾಡಿದ್ದು ಯಾರು ಯಾರ ಅಣತಿ ಅಂತೆ ರಾತ್ರಿ ಪ್ರಕರಣ ನಡೆದಿದೆ. ಇಬ್ಬರು ಸಚಿವರ ಅಣತಿಯಂತೆ ನಡೆದಿದೆ ಎಂದು ಆರೋಪ ಮಾಡಿದರು. ಕಾರಣ ಇಡೀ ಪ್ರಕರಣ ಸಿಐಡಿ ತನಿಖೆ ಆಗಲಿ ಹತ್ತು ನಿಮಿಷಕ್ಕೊಮ್ಮೆ ಪೊಲೀಸರಿಗೆ ಕಾಲ್ ಮಾಡಿದವರು ಯಾರು ಅದು ಮೊದಲು ಗೊತ್ತಾಗಲಿ ಇದು ಅತ್ಯಂತ ಸತ್ಯವಾದ ಮಾಹಿತಿ ಬರುತ್ತದೆ ಎಂದು ಹೇಳಿದರು.