ವಿಜಯಪುರ: ಕಾಂಗ್ರೆಸ್ ಪಕ್ಷವು ದೇಶದಿಂದ ಸರ್ವನಾಶ ಆದ್ರೆ ಸಂವಿಧಾನ ಉಳಿಯುತ್ತೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಇದು ನಕಲಿ ಕಾಂಗ್ರೆಸ್ನ ಅಧಿವೇಶನ, ಅಧಿವೇಶನದಲ್ಲಿ ಇರೋರು ನಕಲಿ ಗಾಂಧಿಗಳು,
ಗಾಂಧೀಜಿ ಹೆಸರು ಇಟ್ಟುಕೊಂಡ ಮಾತ್ರಕ್ಕೆ ಪಾವಿತ್ರ್ಯತೆ ಬರೋದಿಲ್ಲ, ಬಾಬಾ ಸಾಹೇಬ ಅಂಬೇಡ್ಕರ್ ಸ್ಮರಣೆ ಮಾಡಲ್ಲ, ಗಾಂಧಿ ಸ್ಮರಣೆ ಮಾತ್ರ ಮಾಡುತ್ತಾರೆ. ಕಾಂಗ್ರೆಸ್ ಪಕ್ಷವು ದೇಶದಿಂದ ಸರ್ವನಾಶ ಆದ್ರೆ ಸಂವಿಧಾನ ಉಳಿಯುತ್ತೆ ಎಂದು ಹೇಳಿದ್ದಾರೆ.
ಇನ್ನೂ ವಕ್ಫ್ ಹೋರಾಟದ ಬಗ್ಗೆ ಮಾತನಾಡಿದ ಅವರು, ನಾಳೆ ಬೆಂಗಳೂರಿನಲ್ಲಿ ಸಭೆ ಸೇರಿ ನಿರ್ಧಾರ ಮಾಡುತ್ತೇವೆ, ಯತ್ನಾಳ್ ಮಾಲೀಕತ್ವದ ಚಿಂಚೋಳಿಯಲ್ಲಿನ ಕಾರ್ಖಾನೆ ವಿಚಾರದಲ್ಲಿ ಸರ್ಕಾರಕ್ಕೆ ಹಿನ್ನೆಡೆ ವಿಚಾರಕ್ಕೆ ಮಾತನಾಡಿ, ಸರ್ಕಾರ ಕಾರ್ಮಿಕರ ಜೊತೆಗೆ ಚೆಲ್ಲಾಟವಾಡಿದೆ, ಕಾಂಗ್ರೆಸ್ ಪತನ ನಿಶ್ಚಿತ, ನಾವು ಮುಂದೆ ಅಧಿಕಾರಕ್ಕೆ ಬಂದಾಗ ಅವರು ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.