ವಿಜಯಸಾಕ್ಷಿ ಸಉದ್ದಿ, ಬೆಟಗೇರಿ: ಹುಯಿಲಗೋಳ ರಸ್ತೆಯ ಗೌರಿಗುಡಿ ಓಣಿಯಲ್ಲಿ ಶ್ರೀದೇವಿ ಮಹಾತ್ಮೆ ಅರ್ಥಾತ್ ಮಹಿಷಾಸುರ ಮರ್ಧಿನಿ ಎಂಬ ದೊಡ್ಡಾಟವು ಯಶಸ್ವಿಯಾಗಿದ್ದಕ್ಕೆ ಸಮಾಜದ ಅಧ್ಯP್ಷÀರಾದ ಕಾಶಣ್ಣ ವೀರಪ್ಪ ಕುಂದಗೋಳ ಎಲ್ಲಾ ಪಾತ್ರಧಾರಿಗಳಿಗೆ, ಸೂತ್ರಧಾರರಿಗೆ, ಹಿಮ್ಮೇಳ ವಾದಕರಿಗೆ ಮತ್ತು ವ್ಯವಸ್ಥಾಪಕರಿಗೆ ಉಪಹಾರ ಔತಣಕೂಟ ಏರ್ಪಡಿಸಿದ್ದರು.
ಈ ಸಂದರ್ಭದಲ್ಲಿ ಸಮಾಜದ ಉಪಾಧ್ಯಕ್ಷ ಶರಣಬಸಪ್ಪ (ರಾಜು) ಗುಡಿಮನಿ ಮಾತನಾಡಿ, ಈ ದೊಡ್ಡಾಟ ಕಾರ್ಯಕ್ರಮವು ಯಶಸ್ವಿಯಾಗುವದಕ್ಕೆ ಹಿರಿಯರಾದ ಮತ್ತು ಅಧ್ಯಕ್ಷರಾದಕಾಶಣ್ಣ ಕುಂದಗೋಳರು, ಸೂತ್ರಧಾರ ಅಶೋಕ ಸುತಾರ ಮತ್ತು ಎಲ್ಲಾ ಪಾತ್ರಧಾರಿಗಳು ಕಾರಣ. ಗೌರಿಗುಡಿ ಓಣಿಯಲ್ಲಿ ಈ ಹಿಂದೆಯೂ ದೊಡ್ಡಾಟ ನಡೆದಿದ್ದು, ಮುಂದೆಯೂ ಇದೇ ರೀತಿಯ ಕಾರ್ಯಕ್ರಮ ನಡೆಯಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಶಣ್ಣ ಕುಂದಗೋಳ ದಂಪತಿಗಳನ್ನು ಸನ್ಮಾನಿಸಲಾಯಿತು. ದೊಡ್ಡಾಟದ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಲು ಕಾರಣರಾದ ಸುಭಾಷ್ ಮಳಗಿಯವರಿಗೆ ಸಮಾಜದ ಪರವಾಗಿ ರಾಜು ಗುಡಿಮನಿ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರಾದ ಶಿವಪುತ್ರಪ್ಪ ಬೆಂತೂರ, ಬಸಪ್ಪ ಮಾಳಶೆಟ್ಟಿ, ಬಸವರಾಜ ಕುಂದಗೋಳ, ಸುಭಾಷ್ ಮಳಗಿ, ಸತೀಶ ಕುಂದಗೋಳ, ಗವಿಯಪ್ಪ ಮಾದನೂರ, ಹನುಮಾನಸಿಂಗ್ ಬ್ಯಾಳಿ, ಅರುಣ ರಾಯಬಾಗಿ, ಅಜಯ ಕುಂದಗೋಳ, ಸಿದ್ಧಲಿಂಗೇಶ್ವರ ಕುಂದಗೋಳ ಶಿಕ್ಷಕಿ ಮಂಜುಳಾ ರಜಪೂತ, ಕೆ.ಬಿ. ಮಾರನಬಸರಿ, ದೊಡ್ಡಾಟದಲ್ಲಿ ಬಾಲನರ್ತಕಿಯರಾದ ಶ್ರಾವಣಿ, ಸಂಜನಾ, ಲತಾ, ಮಹಾಲಕ್ಷ್ಮೀ, ತನುಶ್ರೀ ಮತ್ತು ಭಾವನಾ ಉಪಸ್ಥಿತರಿದ್ದರು.
ಸಿದ್ಧಲಿಂಗೇಶ್ವರ ಎಮï.ಮುಳ್ಳಾಳ ಕಾರ್ಯಕ್ರಮ ನಿರೂಪಿಸಿದರೆ, ಪ್ರಕಾಶ ಎಸ್.ಮ್ಯಾಗೇರಿ ವಂದಿಸಿದರು.