ಒಂದೇ ಒಂದು ಕಿತ್ತಳೆ ಹಣ್ಣು ತಿಂದ್ರೆ ಇಷ್ಟು ಖಾಯಿಲೆ ಗುಣವಾಗುತ್ತೆ ಗೊತ್ತಾ..?

0
Spread the love

ಕಿತ್ತಳೆ ಹಣ್ಣಿನ ಜ್ಯೂಸ್ ಕುಡಿಯಲು ಸ್ವಲ್ಪ ಹುಳಿ ಸಿಹಿಯ ಮಿಶ್ರಣವಾಗಿದ್ದು, ರುಚಿಕರವಾಗಂತೂ ಇದ್ದೇ ಇರುತ್ತದೆ ಮತ್ತು ಮನಸ್ಸನ್ನು ಸದಾ ಸಂತೋಷಕರವಾಗಿರಿಸುತ್ತದೆ. ಒಂದು ಲೋಟ ತಾಜಾ ಕಿತ್ತಳೆ ರಸವು ನಿಮ್ಮ ಮನಸ್ಥಿತಿಯನ್ನು ಚುರುಕುಗೊಳಿಸುವುದಲ್ಲದೆ ದೇಹದ ಶಕ್ತಿ ವರ್ಧಕವಾಗಿ ಕೂಡ ಕೆಲಸ ಮಾಡುತ್ತದೆ. ನೀವು ಬೇಕಾದರೆ ನಿಮ್ಮ ಬೆಳಗಿನ ಉಪಾಹಾರದೊಂದಿಗೆ ಸಹ ಇದನ್ನು ಸೇವಿಸಬಹುದು ಅಥವಾ ನಿಮ್ಮ ದೈಹಿಕ ಕಸರತ್ತಿನ ಸಂದರ್ಭದ ನಂತರವೂ ಅದನ್ನು ಕುಡಿಯಬಹುದು.

Advertisement

ಪ್ರತಿದಿನ ತಾಜಾ ಕಿತ್ತಳೆ ಹಣ್ಣಿನ ರಸವನ್ನು ಸೇವಿಸುವುದರಿಂದ ಜೀರ್ಣ ಶಕ್ತಿ ಹೆಚ್ಚುತ್ತದೆ. ಜೊತೆಗೆ ರೋಗ ನಿರೋಧಕ ಶಕ್ತಿಯೂ ವೃದ್ಧಿಸುತ್ತದೆ. ಆ್ಯಸಿಡಿಟಿ, ಕ್ಯಾನ್ಸರ್, ಹಾಗೂ ಹೃದಯ ಸಂಬಂಧಿ ರೋಗಗಳನ್ನು ದೂರವಿಡಬಹುದಾಗಿದೆ.

ಪ್ರತಿದಿನ ಕಿತ್ತಳೆ ಹಣ್ಣಿನ ಜ್ಯೂಸ್ ಸೇವಿಸುವುದರಿಂದ ವಯಸ್ಸಾದವರಲ್ಲಿ ರಕ್ತದ ಒತ್ತಡ ಹತೋಟಿಯಲ್ಲಿಡುತ್ತದೆ. ವಿಟಮಿನ್ ಸಿ ಹೆಚ್ಚು ಇರುವ ಕಿತ್ತಳೆ ಹಣ್ಣಿನ ರಸದಲ್ಲಿ ರೋಗದ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣವಿದೆ. ಹೀಗಾಗಿ ಆರೇಂಜ್ ಜ್ಯೂಸ್ ನೀಡಿದ್ರೆ ಹೆಚ್ಚು ಪ್ರಯೋಜನಕಾರಿ.

ಇನ್ನು ಕಿತ್ತಳೆ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಕಿಡ್ನಿ ಸ್ಟೋನ್ ಉಂಟಾಗುವುದಿಲ್ಲ. ಕಿತ್ತಳೆ ರಸ ಅಲ್ಸರ್ ರೋಗಕ್ಕೆ ರಾಮಭಾಣ. ಆರೇಂಜ್ ಜ್ಯೂಸ್ ತೂಕ ಕಡಿಮೆ ಮಾಡಲು ಸಹಾಯಮಾಡುತ್ತೆ. ಜೊತೆಗೆ ಹಾರ್ಟ್ ಅಟ್ಯಾಕ್ ಆಗುವುದನ್ನು ತಡೆಗಟ್ಟುತ್ತದೆ. ಅನಿಮೀಯಾದಿಂದ ಬಳಲುತ್ತಿರುವವರಿಗೆ ಕಿತ್ತಳೆ ರಸ ದಿವ್ಯೌಷಧ. ಇನ್ನು ಪ್ರತದಿನ ಕಿತ್ತಳೆ ರಸವನ್ನು ಸೇವಿಸುವುದರಿಂದ ದೇಹದಲ್ಲಿನ ಟಾಕ್ಸಿನ್ ಕಡಿಮೆಯಾಗಿ ಚರ್ಮ ಸುಂದರವಾಗಿರುತ್ತೆ.  ಕಿತ್ತಳೆ ಹಣ್ಣಿನಲ್ಲಿ ದೇಹಕ್ಕೆ ಅಗತ್ಯವಿರುವ ಸಿ ವಿಟಮಿನ್ ಹೆಚ್ಚಾಗಿ ಇದೆ.

ಇನ್ನು ವಯಸ್ಸಾದವರಿಗೆ ಅಂದರೆ 60 ವರ್ಷ ದಾಟಿದವರಿಗೆ ಪ್ರತಿದಿನ 500 ಎಂ.ಎಲ್ ಕಿತ್ತಳೆ ಹಣ್ಣಿನ ಜ್ಯೂಸ್ ನೀಡಿದ್ರೆ ಅವರ ಬುದ್ದಿ ಶಕ್ತಿ ಚುರುಕುಗೊಳ್ಳುತ್ತದೆ ಹಾಗೂ ಅವರು ಹೆಚ್ಚು ಚಟುವಟಿಕೆಯಿಂದ ಇರುತ್ತಾರೆ ಎಂದು ಲಂಡನ್ ವಿಶ್ವ ವಿದ್ಯಾನಿಲಯವೊಂದು ತನ್ನ ಸಂಶೋಧನೆಯಿಂದ ಸಾಬೀತು ಪಡಿಸಿದೆ.


Spread the love

LEAVE A REPLY

Please enter your comment!
Please enter your name here