ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಡಾ. ಬಿ.ಆರ್. ಅಂಬೇಡ್ಕರರು ರಚಿಸಿದ ಸಂವಿಧಾನದಿAದಲೇ ಪ್ರಜಾಪ್ರಭುತ್ವ ಇನ್ನೂ ಗಟ್ಟಿಯಾಗಿದೆ. ಬೇರೆ ದೇಶಗಳಲ್ಲಿ ೨೫ ವರ್ಷಗಳಿಗೆ ಪ್ರಜಾಪ್ರಭುತ್ವ ಬಿದ್ದುಹೋಗಿದೆ. ನಮ್ಮ ದೇಶದಲ್ಲಿ ೭೫ ವರ್ಷಗಳಾದರೂ ಇನ್ನೂ ಗಟ್ಟಿಯಾಗಿರುವುದೇ ಇದಕ್ಕೆ ಸಾಕ್ಷಿ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಅವರು ಗುರುವಾರ ಶಿರಹಟ್ಟಿ ಬ್ಲಾಕ್ ಕಾಂಗ್ರೆಸ್ ಕಮಿಟಿ, ಡಿ.ಕೆ. ಶಿವಕುಮಾರ ಅಭಿಮಾನಿಗಳ ಬಳಗ, ದಲಿತ ಸಂಘಟನೆಗಳು ಮತ್ತು ವಿವಿಧ ಕನ್ನಡಪರ ಸಂಘಟನೆಗಳು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ತಹಸೀಲ್ದಾರ ಮೂಲಕ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಬ್ರಿಟಿಷರು ದೇಶ ಬಿಟ್ಟು ಹೋಗುವ ೩ ವರ್ಷದ ಮುನ್ನವೇ ದೇಶಕ್ಕೆ ಯಾವ ಮಾದರಿ ಆಡಳಿತ ಬೇಕು ಎನ್ನುವುದನ್ನು ತೀರ್ಮಾನಿಸಿಕೊಳ್ಳಿ ಎಂದು ದೇಶದ ಜನತೆಗೆ ಹೇಳಿದ್ದರು. ಅಯ್ಯರ್ ಎಂಬ ಕೊಂಕಣಿ ಪಂಡಿತರು ಡಾ. ಬಿ.ಆರ್. ಅಂಬೇಡ್ಕರ ಅವರಿಂದ ಮಾತ್ರ ದೇಶದ ಸಂವಿಧಾನ ರಚಿಸಲು ಸಾಧ್ಯ ಎಂದು ಹೇಳಿದ್ದರು. ಆ ಪ್ರಯುಕ್ತ ಇಡೀ ಜಗತ್ತಿನಲ್ಲಿಯೇ ಅತ್ಯಂತ ಶಕ್ತಿಯುತ ಮತ್ತು ಗಟ್ಟಿಯಾದ ಸಂವಿಧಾನ ನಮ್ಮದಾಗಿದೆ. ಇಂತಹ ಸಂವಿಧಾನ ರಚಿಸಿದವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಸರಿಯಲ್ಲ. ಈ ಕೂಡಲೇ ಇಂತಹ ಹೇಳಿಕೆಗಳನ್ನು ನೀಡುವದನ್ನು ನಿಲ್ಲಿಸಬೇಕೆಂದು ಹೇಳಿದರು.
ಕೆಪಿಸಿಸಿ ಪ್ರ.ಕಾರ್ಯದರ್ಶಿ ಸುಜಾತಾ ದೊಡ್ಡಮನಿ ಮಾತನಾಡಿ, ಬಿಜೆಪಿಯವರಿಗೆ ಮತಿಭ್ರಮಣೆಯಾದಂತಿದೆ. ಸಂವಿಧಾನ ಬದಲಾವಣೆ ಮಾಡುವುದಾಗಿ ಅಲ್ಲಲ್ಲಿ ಮಾತುಗಳು ಕೇಳಿ ಬರುತ್ತಿತ್ತು. ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಾಯಲ್ಲಿ ಅಂತಹ ಮಾತುಗಳು ಬರುತ್ತಿವೆ. ಇದೀಗ ಕೇವಲ ಶೇ.೨೫ ಮಾತ್ರ ಹೋರಾಟ ನಡೆಯುತ್ತಿದ್ದು, ಇನ್ನೂ ಶೇ. ೭೫ರಷ್ಟು ಜನತೆ ಹೋರಾಟದಲ್ಲಿ ಭಾಗಿಯಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಪಕ್ಷದ ಜಿಲ್ಲಾಧ್ಯಕ್ಷ ಜಿ.ಎಸ್. ಪಾಟೀಲರು ನಮಗೆ ಈಗಾಗಲೇ ನಿರ್ದೇಶನ ನೀಡಿದ್ದು, ಈ ಬಗ್ಗೆ ಪ್ರತಿ ಗ್ರಾಮದಲ್ಲಿಯೂ ಹೋರಾಟ ಮಾಡಬೇಕೆಂದು ತಿಳಿಸಿದ್ದಾರೆ. ಆದ್ದರಿಂದ ಕೇಂದ್ರ ಸಚಿವ ಅಮಿತ್ ಶಾ ಈ ಕೂಡಲೇ ದೇಶದ ಜನತೆಯ ಕ್ಷಮೆ ಯಾಚಿಸಬೇಕು ಎಂದರು.
ಮಾಜಿ ಶಾಸಕ ರಾಮಣ್ಣ ಲಮಾಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಮಾಯೂನ್ ಮಾಗಡಿ, ಮುಖಂಡರಾದ ಡಿ.ಕೆ. ಹೊನ್ನಪ್ಪನವರ, ಮಂಜುನಾಥ ಘಂಟಿ, ಮುತ್ತುರಾಜ ಭಾವಿಮನಿ ಮಾತನಾಡಿದರು.
ಪ.ಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ, ದೇವಪ್ಪ ಲಮಾಣಿ, ಪಕ್ಷದ ವಕ್ತಾರೆ ಭಾಗ್ಯಶ್ರೀ ಬಾಬಣ್ಣ, ಹೊನ್ನಪ್ಪ ಶಿರಹಟ್ಟಿ, ಹಮೀದ ಸನದಿ, ಅಶ್ರತ ಢಾಲಾಯತ, ದೇವಪ್ಪ ಆಡೂರ, ಸುರೇಶ ಬೀರಣ್ಣವರ, ಮಹೇಂದ್ರ ಉಡಚಣ್ಣವರ, ಈರಣ್ಣ ಚವ್ಹಾಣ, ಆನಂದ ಕೋಳಿ, ದೇವೆಂದ್ರ ಶಿಂಧೆ, ಮಾಬುಸಾಬ ಲಕ್ಷೆö್ಮÃಶ್ವರ, ಅಲ್ಲಾಭಕ್ಷಿ ನಗಾರಿ, ಮಹಾಂತೇಶ ದಶಮನಿ, ನಜೀರ ಡಂಬಳ, ಅನಿಲ ಮಾನೆ, ಬುಡನಶ್ಯಾ ಮಕಾನದಾರ ಮುಂತಾದವರು ಉಪಸ್ಥಿತರಿದ್ದರು.
ಗುರುವಾರ ವಿವಿಧ ಸಂಘಟನೆಗಳು ಶಿರಹಟ್ಟಿ ಬಂದ್‌ಗೆ ಕರೆ ನೀಡಿದ್ದವು. ಶ್ರೀ ಜ.ಫಕೀರೇಶ್ವರ ಮಠದಿಂದ ಪ್ರತಿಭಟನೆ ಪ್ರಾರಂಭವಾಗಿ ಪ್ರಮುಖ ವೃತ್ತಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆ ಕೂಗುತ್ತಾ, ಅವರ ಪ್ರತಿಕೃತಿಯನ್ನು ದಹನ ಮಾಡಲಾಯಿತು. ಮಾರುಕಟ್ಟೆಯಲ್ಲಿ ಸ್ವಯಂಘೋಷಿತವಾಗಿ ಅಂಗಡಿಗಳು ವ್ಯಾಪಾರವನ್ನು ಸ್ಥಗಿತಗೊಳಿಸಿದ್ದವು. ತದನಂತರ ಮಧ್ಯಾಹ್ನದ ಹೊತ್ತಿಗೆ ಪುನಃ ವ್ಯಾಪಾರ ವಹಿವಾಟು ಪ್ರಾರಂಭವಾದವು. ಸಿಪಿಐ ನಾಗರಾಜ ಮಾಢಳ್ಳಿ ಮತ್ತು ಪಿಎಸ್‌ಐ ಮತ್ತು ಪೋಲೀಸ್ ಸಿಬ್ಬಂದಿ ಅಗತ್ಯ ಬಂದೋಬಸ್ತ್ ಕೈಗೊಂಡಿದ್ದರು.