ಮೈಸೂರು: ಇತ್ತೀಚಿನ ದಿನಗಳಲ್ಲಿ ಅತ್ಯಮೂಲ್ಯವಾದ ಮನುಷ್ಯನ ಪ್ರಾಣಕ್ಕೆ ಬೆಲೆಯೇ ಇಲ್ಲದಂತಾಗಿದ್ದು, ಪ್ರತಿನಿತ್ಯ ಕ್ರೌರ್ಯ ಮೆರೆಯುವವರ ಸಂಖ್ಯೆಯು ಹೆಚ್ಚುತ್ತಿದೆ. ಸಣ್ಣ ಸಣ್ಣ ವಿಷಯಕ್ಕೆ ನಡೆಯುತ್ತಿರುವ ಹಲ್ಲೆಗಳು, ನಂತರ ಕೊಲೆಗೆ ತಿರುಗಿ ತಮ್ಮವರನ್ನೆ ಬಲಿ ಪಡೆಯುತ್ತಿರುವ ಘೋರ ಸುದ್ಧಿಗಳು ಪ್ರಸ್ತುತ ಜಗತ್ತಿನಲ್ಲಿ ಸರ್ವಸಾಮಾನ್ಯವಾಗಿಬಿಟ್ಟಿದೆ.
ಕೆಲವು ಸಂದರ್ಭ ಆಸ್ತಿಗಾಗಿ ನಡೆಯುವ ಕೊಲೆಗಳು, ನಡೆಯುತ್ತಿವೆ. ಅಂತಹದೆ ಒಂದು ಅವಮಾನವೀಯ, ನಡೆಯ ಬಾರದ ಘಟನೆಯೊಂದು ಮೈಸೂರಿನ, ಪಿರಿಯಾಪಟ್ಟಣ ತಾಲ್ಲೂಕಿನ ಗೆರೋಸಿ ಕಾಲೋನಿಯಲ್ಲಿ ನಡೆದಿದೆ.
ಹೌದು ಕೇವಲ ಎಲ್ ಐಸಿ ಹಣದ ಆಸೆಗೆ ಸ್ವಂತ ಅಪ್ಪನ್ನನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ. ಪಾಂಡು ಕೊಲೆ ಮಾಡಿದ ಆರೋಪಿಯಾಗಿದ್ದು, ಅಣ್ಣಪ್ಪ ಮೃತ ದುರ್ಧೈವಿಯಾಗಿದ್ದು, ಪಾಂಡು ಎಂಬಾತ ತನ್ನ ತಂದೆ ಅಣ್ಣಪ್ಪನ ಹೆಸರಿನಲ್ಲಿ ವಿಮೆ ಮಾಡಿಸಿದ್ದನು. ಆ ಹಣವನ್ನು ಲಪಟಾಯಿಸಲು ತನ್ನ ಸ್ವಂತ ತಂದೆಯನ್ನೆ ಮಗ ಕೊಲೆ ಮಾಡಿದ್ದಾನೆ.
ಟಿಬೇಟಿಯನ್ ಕ್ಯಾಂಪಿನಲ್ಲಿ ಕೆಲಸ ಇದೆ ಹೋಗಿ ಎಂದು ಹೇಳಿದ್ದ ಮಗ ಪಾಂಡು ಮಾತನ್ನು ಕೇಳಿ ತಂದೆ ಅಪ್ಪಣ್ಣ ಹೋಗುವಾಗ. ಹಿಂದಿನಿಂದ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ನಂತರ ಶವವನ್ನು ಬಿ.ಎಂ.ರಸ್ತೆಯ ಮಂಚದೇವನಹಳ್ಳಿ ಸಮೀಪ ಎಸೆದು. ಅಪರಿಚಿತ ವಾಹನ ಡಿಕ್ಕಿ ಹೊಡೆದು ತಂದೆ ಸಾವನ್ನಪ್ಪಿದ್ದಾರೆ ಎಂದು ಪಾಂಡು ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದನು.
ಆದರೆ ಅನುಮಾನ ಬಂದ ಹಿನ್ನಲೆ ಪೊಲೀಸರು ಪಾಂಡುವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ. ವಿಮೆ ಹಣಕ್ಕೆ ಕೊಲೆ ಮಾಡಿದ್ದನು ಒಪ್ಪಿಕೊಂಡಿದ್ದಾನೆ. ತಂದೆ ನಿಧನ ಹೊಂದಿದ ಹಿನ್ನೆಲೆಯಲ್ಲಿ ಅಣ್ಣನಾದ ಧರ್ಮ ಕೂಡ ನೇಣಿಗೆ ಶರಣಾಗಿದ್ದಾನೆ. ಆರೋಪಿಯನ್ನ ವಶಪಡಿಸಿಕೊಂಡಿರುವ ಬೈಲುಕೊಪ್ಪೆ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


