ಹಾವೇರಿ:-ನಗರದ ವೀರಾಪುರ ಆಸ್ಪತ್ರೆಯಲ್ಲಿ ದುರಂತ ಒಂದು ಸಂಭವಿಸಿದೆ. ಹೊಟ್ಟೆನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಸಾವನ್ನಪ್ಪಿದ್ದಾರೆ.
23 ವರ್ಷದ ಅರಳಿಕಟ್ಟಿ ಮೃತ ಮಹಿಳೆ ಎನ್ನಲಾಗಿದೆ. ಮೆಡಿಸಿನ್ ಓವರ್ಡೋಸ್ ಮತ್ತು ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾಳೆಂದು ಕುಟುಂಬಸ್ಥರು ಆರೋಪಿಸಿದ್ದು, ಆಸ್ಪತ್ರೆ ವಿರುದ್ಧ ಮಹಿಳಾ ಪೋಷಕರಿಂದ ಪ್ರತಿಭಟನೆ ಮಾಡಲಾಗಿದೆ.
ಇತ್ತೀಚೆಗೆ ಆಸ್ಪತ್ರೆಗಳಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದು ಆತಂಕ ಮೂಡಿಸಿದೆ.



