ಮೈಸೂರು: ಡಾಲಿ ಧನಂಜಯ್ ಮತ್ತು ಧನ್ಯತಾ ಅವರು ಫೆಬ್ರವರಿ ತಿಂಗಳಲ್ಲಿ ವಿವಾಹವಾಗಲಿದ್ದು, ನಾಡಿನ ಗಣ್ಯರನ್ನು ತಮ್ಮ ಮದುವೆಗೆ ಆಹ್ವಾನಿಸುತ್ತಿದ್ದಾರೆ. ಇದೀಗ ಚಾಮುಂಡಿ ಬೆಟ್ಟಕ್ಕೆ ನಟ ಡಾಲಿ ಧನಂಜಯ್ ಹಾಗೂ ಭಾವಿ ಪತ್ನಿ ಡಾ. ಧನ್ಯತಾ ಇಂದು ಬೆಳಗ್ಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
Advertisement
ಅದಲ್ಲದೆ ಲಗ್ನ ಪತ್ರಿಕೆಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ಅವರ ಜೊತೆ ಭಾವಿ ಪತ್ನಿ ಡಾ. ಧನ್ಯತಾ ಕೂಡ ಇದ್ದರು. ದೇವರ ದರ್ಶನದ ಬಳಿಕ ಮಾತನಾಡಿದ ನಟ, ಮದುವೆಗೆ ಸಿದ್ಧತೆಗಳು ನಡೆಯುತ್ತಿವೆ. ಲಗ್ನ ಪತ್ರಿಕೆ ಕೊಡುವುದನ್ನು ಶುರು ಮಾಡಿದ್ದೇನೆ.
ಹಿರಿಯರಿಗೆ ಈಗಾಗಲೇ ಲಗ್ನ ಪತ್ರಿಕೆ ಕೊಡಲು ಶುರು ಮಾಡಿದ್ದೇನೆ. ಇಂದು ಚಾಮುಂಡಿ ಬೆಟ್ಟದಲ್ಲಿ ಲಗ್ನ ಪತ್ರಿಕೆಗೆ ಪೂಜೆ ಸಲ್ಲಿಸಿದ್ದೇನೆ. ಮೈಸೂರಿನಲ್ಲೇ ಮದುವೆ ನಡೆಯುತ್ತಿದೆ. ಎಲ್ಲರೂ ಬಂದು ಆಶೀರ್ವಾದ ಮಾಡಿ. ಎಲ್ಲರಿಗೂ ಲಗ್ನ ಪತ್ರಿಕೆ ಕೊಡುತ್ತೇನೆ ಎಂದು ಹೇಳಿದ್ದಾರೆ.