ಬಾಗಲಕೋಟೆ: ಕಾಂಗ್ರೆಸ್ ಸರ್ಕಾರ ಮಠಗಳಿಗೆ ನೋಟಿಸ್ ಕಳಿಸುವ ಮೂಲಕ ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ, ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಸಿ
Advertisement
ದ್ದಗಂಗಾ ಮಠಕ್ಕೆ ಬಿಲ್ ನೋಟಿಸ್ ವಿಚಾರವಾಗಿ ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಈ ಸರ್ಕಾರ ಮಠಗಳಿಗೆ ನೋಟಿಸ್ ಕಳಿಸುವ ಮೂಲಕ ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿದೆ ಎಂದಿದ್ದಾರೆ. ಇನ್ನೂ ಮಠಗಳಿಗೆ ನೋಟಿಸ್ ಕಳಿಸಿದರೆ ಚರ್ಚ್, ಮಸೀದಿಗಳಿಗೂ ಕಳಿಸಬೇಕಲ್ಲವ?
ರಾಜ್ಯದಲ್ಲಿ ಎಷ್ಟು ಚರ್ಚ್, ಮಸೀದಿಗಳಿಗೆ ಬಿಲ್ ಕಳಿಸಿದ್ದೀರಿ ಹೇಳಿ ನೋಡೋಣ ಎಂದು ಪ್ರಶ್ನಿಸಿದ್ದಾರೆ. ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ, ಅವರಿಗೊಂದು ಕಾನೂನು, ಹಿಂದೂಗಳಿಗೊಂದು ಕಾನೂನು. ನಾವಿದನ್ನು ಕ್ಷಮಿಸುವುದಿಲ್ಲ ಮಠಕ್ಕೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.