ಬಿಗ್ ಬಾಸ್ ಮನೆಯಲ್ಲಿ ಗಿಫ್ಟ್ ಕಹಾನಿ: ತ್ರಿವಿಕ್ರಮ್ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ ಸುದೀಪ್

0
Spread the love

‘ಬಿಗ್ ಬಾಸ್ ಸೀಸನ್ 11’ರ ಆಟ ದಿನದಿಂದ ದಿನಕ್ಕೆ ಸಾಕಷ್ಟು ತಿರುವುಗಳನ್ನು ಪಡೆದು 90ನೇ ದಿನದತ್ತ ಮುನ್ನುಗ್ಗುತ್ತಿದೆ. ಹೀಗಿರುವಾಗ ಇಂದಿನ ಎಪಿಸೋಡ್​ನಲ್ಲಿ ಸುದೀಪ್ ಆಕ್ಟಿವಿಟಿ ಒಂದನ್ನು ಮಾಡಿಸಿದ್ದಾರೆ. ಸ್ಪರ್ಧಿಗಳು ತಮ್ಮದಾದ ವಸ್ತುವೊಂದನ್ನು ತಮ್ಮ ಪ್ರೀತಿ ಪಾತ್ರರಿಗೆ ನೀಡಬೇಕಿತ್ತು, ಹಲವರು ತಮ್ಮ ವಸ್ತುಗಳನ್ನು ಇತರ ಸ್ಪರ್ಧಿಗಳಿಗೆ ನೀಡಿದರು.

Advertisement

ಎಲ್ಲರ ನಿರೀಕ್ಷೆಯಂತೆ ಭವ್ಯಾ ಗೌಡ, ತಮ್ಮ ಆತ್ಮೀಯ ಗೆಳೆಯ ತ್ರಿವಿಕ್ರಮ್​ಗೆ ವಸ್ತುವೊಂದನ್ನು ಉಡುಗೊರೆಯಾಗಿ ನೀಡಿದರು.  ನಂತರ ತ್ರಿವಿಕ್ರಮ ಅವರ ಗುಣವನ್ನು ಹೊಗಳಿ ಕೊಂಡಾಡಿದರು. ಇದನ್ನು ಕೇಳಿ ಸುದೀಪ್ ಇದು ಎಂಥಾ ಸರ್​ಪ್ರೈಸ್​ ಅಲ್ವಾ ಎಂದು ಹೇಳುತ್ತಿದ್ದಂತೆ ಎಲ್ಲರು ನಕ್ಕಿದ್ದಾರೆ. ನಾಚುತ್ತಲೇ ತ್ರಿವಿಕ್ರಮ್​ ಕುರಿತು ಮಾತನಾಡಿದ ಭವ್ಯ, ಈ ವ್ಯಕ್ತಿ ನೋಡುವುದಕ್ಕೆ ತುಂಬಾ ಹಾರ್ಸ್​ ಅನಿಸ್ತಾರೆ.​ ಆದರೆ ಅವರು ವೇರಿ ಸ್ವೀಟ್ ಆ್ಯಂಡ್ ಎಂದು ಹೇಳುತ್ತಿದ್ದರು.

ಆಗ ತಮಾಷೆಯಾಗಿ ಸುದೀಪ್​ ಸ್ವಾರಿ.. ಏನ್​ ಹೇಳುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಕ್ಕೆ ಭವ್ಯ ನಿಂತಲ್ಲೇ ನೀರಾಗಿ ಹೋಗಿದ್ದಾರೆ. ಮತ್ತೆ ಮಾತನಾಡಿದ ಭವ್ಯ, ತ್ರಿವಿಕ್ರಮ್​​ರನ್ನ ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ ಸರ್. ಅರ್ಥ ಮಾಡಿಕೊಂಡ ಮೇಲೆ ತ್ರಿವಿಕ್ರಮ್​​ನಿಂದ ದೂರ ಹಾಗೋದು ಕಷ್ಟ ಎಂದು ಹೇಳಿದ್ದಾರೆ. ಇದನ್ನು ಕೇಳಿದ ಮನೆಯಲ್ಲಿ ಎಲ್ಲಾರೂ ನಕ್ಕಿದ್ದಾರೆ.

 

 


Spread the love

LEAVE A REPLY

Please enter your comment!
Please enter your name here