ಹುಬ್ಬಳ್ಳಿ: ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಸರಣಿ ಸಾವು ಮುಂದುವರೆದಿದೆ. ನಿನ್ನೆ ತಡರಾತ್ರಿ ಚಿಕಿತ್ಸೆ ಫಲಿಸದೆ ಶಂಕರ್ ಚವಾಣ್ (29) ಎಂಬ ಅಯ್ಯಪ್ಪ ಮಾಲಾಧಾರಿ ಮೃತಪಟ್ಟಿದ್ದರು. ಇದೀಗ ಮತ್ತೊಬ್ಬರು ಮೃತಪಟ್ಟಿದ್ದು, ಸಾವಿನಸಂಖ್ಯೆ 6ಕ್ಕೆಏರಿಕೆಯಾಗಿದೆ.
ಮೂವರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಮಂಜುನಾಥ ವಾಗ್ಮೋಡೆ (22 ) ಮೃತ ಮಾಲಾಧಾರಿಯಾಗಿದ್ದು, ಮೃತ ಮಂಜುನಾಥ ಎರಡನೇ ವರ್ಷ ಡಿಪ್ಲೊಮಾ ಓದುತ್ತಿದ್ದರು. ಎರಡನೇ ವರ್ಷ ಅಯ್ಯಪ್ಪ ವೃತ ಮಾಡಲು ಮಾಲೆ ಹಾಕಿದ್ದರು.
ಇವತ್ತು ಒಂದೇ ದಿನ ಇಬ್ಬರು ಮಾಲಾಧಾರಿಗಳು ಮೃತಪಟ್ಟಿದ್ದಾರೆ. ತಡರಾತ್ರಿ ಶಂಕರ ಚವ್ಹಾಣ್ ಮೃತಪಟ್ಟರೆ, ಬೆಳಗ್ಗೆ ಮಂಜುನಾಥ ವಾಗ್ಮೋಡೆ ಮೃತಪಟ್ಟಿದ್ದಾರೆ. ಗಾಯಗೊಂಡ 9 ಜನರಲ್ಲಿ ಸದ್ಯಕ್ಕೆ ಆರು ಜನರು ಮೃತಪಟ್ಟಿದ್ದಾರೆ. ಇನ್ನುಳಿದ ಮೂರು ಜನರಿಗೆ ಚಿಕಿತ್ಸೆ ಮುಂದುವರೆದಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಇನ್ನೂ ಗಂಭೀರವಾಗಿದೆ. ಓರ್ವರಲ್ಲಿ ಚೇತರಿಕೆ ಕಂಡು ಬಂದಿದೆ.