Australia vs India: ಸುನಿಲ್ ಗವಾಸ್ಕರ್ ಪಾದ ಮುಟ್ಟಿ ಗೌರವಿಸಿದ ನಿತೀಶ್ ಕುಮಾರ್ ತಂದೆ!

0
Spread the love

ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡದ ವಿರುದ್ಧ ತಮ್ಮ ವೃತ್ತಿಜೀವನದ ನಾಲ್ಕನೇ ಟೆಸ್ಟ್‌ನಲ್ಲಿ ನಿತೀಶ್ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದಾರೆ. ನಿತೀಶ್ ಅವರ ಈ ಶತಕದ ಇನ್ನಿಂಗ್ಸ್​ನಿಂದಾಗಿ ಟೀಂ ಇಂಡಿಯಾ ಫಾಲೋ ಆನ್ ಜೊತೆಗೆ ಸೋಲಿನ ಭೀತಿಯಿಂದಲೂ ಪಾರಾಗಿದೆ.

Advertisement

ಇತ್ತ ನಿತೀಶ್ ಶತಕ ಪೂರೈಸುತ್ತಿದ್ದರೆ, ಅತ್ತ ಅವರ ತಂದೆ ಮುತ್ಯಾಲ ರೆಡ್ಡಿ ಆನಂದಭಾಷ್ಪ ಸುರಿಸಿದ್ದರು. ಇದಾದ ಬಳಿಕ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂನ ಕಾಮೆಂಟ್ರಿ ರೂಮ್​ ಬಳಿ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ ದಿ ಲೆಜೆಂಡ್ ಸುನಿಲ್ ಗವಾಸ್ಕರ್ ಅವರನ್ನು ಭೇಟಿಯಾಗಿದ್ದಾರೆ.

ಗವಾಸ್ಕರ್ ಅವರೊಂದಿಗೆ ಮಾತನಾಡುತ್ತಾ ಮುತ್ಯಾಲ ರೆಡ್ಡಿ ದಂಪತಿ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದು ವಿಶೇಷವಾಗಿತ್ತು. ಇದೀಗ ಗವಾಸ್ಕರ್ ಅವರಿಂದ ಆಶೀರ್ವಾದ ಪಡೆಯುತ್ತಿರುವ ನಿತೀಶ್ ಕುಮಾರ್ ರೆಡ್ಡಿ ಅವರ ಪೋಷಕರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


Spread the love

LEAVE A REPLY

Please enter your comment!
Please enter your name here