ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಸಮೃದ್ಧ ರಾಷ್ಟç ನಿರ್ಮಾಣಕ್ಕಾಗಿ ಅನ್ನದಾತ ರೈತರನ್ನು ಸಶಕ್ತರನ್ನಾಗಿ ಮಾಡಬೇಕಾಗಿದ್ದು, ನೂತನ ವರ್ಷವನ್ನು ರೈತರ ಏಳ್ಗೆಗಾಗಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯವು ಭಗವಂತನಲ್ಲಿ ಸಂಕಲ್ಪ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಧಾರವಾಡ ವಲಯದ ಸಂಚಾಲಕಿ ಬಿ.ಕೆ ಜಯಂತಿ ಅಕ್ಕನವರ ಹೇಳಿದರು.
ಇಲ್ಲಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಶಾಖೆಯಲ್ಲಿ ಹಮ್ಮಿಕೊಂಡಿದ್ದ 2025ರ ನೂತನ ವರ್ಷಾಚರಣೆ ಅಂಗವಾಗಿ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು.
ನಮ್ಮ ದೇಶದ ಬೆನ್ನೆಲುಬಾಗಿರುವ ರೈತರನ್ನು ದೈಹಿಕ ಮತ್ತು ಆಂತರಿಕವಾಗಿ ಸಶಕ್ತರನ್ನಾಗಿ ಮಾಡಬೇಕಾಗಿದ್ದು, ಅವರ ಆತ್ಮ ಶಕ್ತಿಯನ್ನು ಅಧಿಕಗೊಳಿಸಬೇಕಾಗಿದೆ. ಕಾರಣ, ಇಂದಿನ ಹವಾಮಾನ ವೈಪರಿತ್ಯ, ದರ ಕುಸಿತದಿಂದ ನಷ್ಟ ಅನುಭವಿಸುತ್ತಿರುವ ರೈತರು ಆಂತರಿಕವಾಗಿ ಕುಗ್ಗುತ್ತಿದ್ದಾರೆ. ಇದರಿಂದ ಮದ್ಯಪಾನದಂತ ದುಶ್ಚಟದ ದಾಸರಾಗಿ ಅನಾರೋಗ್ಯ ಪೀಡಿತರಾಗುತ್ತಿದ್ದಾರೆ. ಆದ್ದರಿಂದ ನೆಮ್ಮದಿಯ ಜೀವನ ಸಾಗಿಸಲು, ದುಶ್ಚಟದಿಂದ ದೂರವಿರಲು ಜ್ಞಾನ, ಯೋಗ, ಧಾರಣೆ ಮತ್ತು ಸಾಧನೆಯ ಪಾಠಗಳ ಮೂಲಕ ಪರಮಾತ್ಮನ ಪರಿಚಯವನ್ನು ಮಾಡಿಕೊಡಬೇಕಾಗಿದೆ. ಅವರ ಆತ್ಮಕ್ಕೆ ಒಳ್ಳೆಯ ಸಂಸ್ಕಾರ ನೀಡಬೇಕಾಗಿದೆ. ಆದ್ದರಿಂದ ಇಂದಿನಿAದ ನಾವೆಲ್ಲರೂ ರೈತರ ಅಭಿವೃದ್ಧಿಗಾಗಿ ಸಮೃದ್ಧ ರಾಷ್ಟçಕ್ಕಾಗಿ ಸಂಕಲ್ಪ ಮಾಡಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಯೋಧ, ರೈತ ದತ್ತಾತ್ರೇಯ ಜೋಶಿ ಮಾತನಾಡಿ ಸೈನಿಕನಾಗಿ ದೇಶ ಸೇವೆಯಲ್ಲಿ ತೊಡಗಿಕೊಂಡಿದ್ದು ತೃಪ್ತಿ ತಂದಿದೆ. ನಿವೃತ್ತಿ ನಂತರ ಕೃಷಿಯನ್ನು ಅಳವಡಿಸಿಕೊಂಡು ಎತ್ತು, ಆಕಳುಗಳೊಂದಿಗೆ ಕೃಷಿಯನ್ನು ಮಾಡುತ್ತಿದ್ದೇನೆ. ಪ್ರತಿಯೊಬ್ಬರೂ ಗೋವನ್ನು ಸಾಕುವದರಿಂದ ಮನೆಯಲ್ಲಿ ಧನಾತ್ಮಕ ಚಟುವಟಿಕೆಗಳು ನಡೆಯುತ್ತವೆ ಎಂದರು.
ಫಕ್ಕೀರಗೌಡ್ರ ಪವಾಡಿಗೌಡ್ರ, ಗುರುಶಾಂತ ಅರಹುಣಶಿ, ಈರಪ್ಪ ಗುಂಡಳ್ಳಿ, ಪ್ರಭು ಬೆಂತೂರು, ಶಿವಪುತ್ರಪ್ಪ ರಿತ್ತಿ, ಲಕ್ಷ್ಮಣಪ್ಪ, ನಿಡಗುಂದಿ, ಪುತ್ರಪ್ಪ ಸೊರಟೂರು, ಸಣ್ಣಕೊಟ್ರಪ್ಪ ಶಿಗ್ಲಿ, ಹನುಮಂತಪ್ಪ ಹಿರೇಹಾಳ, ಆನಂದ ಕವಲೂರು, ಮಲ್ಲಿಕಾರ್ಜುನ ಅಡವಿಸೋಮಾಪೂರ, ಈರಣ್ಣ ಹರ್ತಿ, ಶೆಟ್ಟೆಪ್ಪ ಹೊನ್ನರೆಡ್ಡಿ ಅವರನ್ನು ಸನ್ಮಾನಿಸಲಾಯಿತು.
ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ನಂದಾ ಜ್ಯೋತಿಯನ್ನು ಬೆಳಗುವದರೊಂದಿಗೆ ನೂತನ ವರ್ಷವನ್ನು ಸ್ವಾಗತಿಸಿ ಪಾಕೆಟ್ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಸಮೃದ್ಧ ರಾಷ್ಟ್ರ ನಿರ್ಮಾಣಕ್ಕಾಗಿ ಅನ್ನದಾತ ರೈತರನ್ನು ಸಶಕ್ತರನ್ನಾಗಿ ಮಾಡುವ ಸಂಕಲ್ಪ ಮಾಡಲಾಯಿತು. ಆರ್.ಎನ್. ಗೌಡರ ಸ್ವಾಗತಿಸಿದರು. ಬ್ರಹ್ಮುಕುಮಾರಿ ಶಾಖೆಯ ಬಿ.ಕೆ. ಸರೋಜಕ್ಕ ನಿರೂಪಿಸಿದರು.
ಭಾರತೀಯ ಕಿಸಾನ್ ಸಂಘದ ತಾಲೂಕಾಧ್ಯಕ್ಷ ವೆಂಕಟೇಶ ದೊಂಗಡೆ ಮಾತನಾಡಿ, ಗೋ ಆಧಾರಿತ ಕೃಷಿಯನ್ನು ಅಳವಡಿಸಿಕೊಂಡು ಸಾವಯವ ಗೊಬ್ಬರವನ್ನು ಹಾಕಿ ವಿಷಮುಕ್ತ ಆಹಾರವನ್ನು ತಯಾರಿಸಲು ರೈತರು ಮುಂದಾಗಬೇಕು. ಗೋ ಸಂತತಿಯನ್ನು ಅಧಿಕ ಮಾಡಬೇಕು ಎಂದರು.