ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಭಕ್ತರ ಏಳಿಗೆಗಾಗಿ ಸಾಮಾಜಮುಖಿ ಕಾರ್ಯಗಳಿಂದ ಹೆಸರುವಾಸಿಯಾದ ಶ್ರೀ ಗವಿಮಠ ಭಕ್ತರಲ್ಲಿ ಭಗವಂತನನ್ನು ಕಾಣುತ್ತಿದೆ ಎನ್ನುವುದಕ್ಕೆ ಮಹಾಜಾತ್ರೋತ್ಸವ ಹಾಗೂ ಮಹಾದಾಸೋಹ ಶೈಕ್ಷಣಿಕ ಕೊಡುಗೆಗಳೇ ಸಾಕ್ಷಿ. ಇನ್ನೊಂದು ಹೆಜ್ಜೆ ಎಂಬAತೆ ಶ್ರೀಮಠಕ್ಕೆ ಆಗಮಿಸುವ ಪ್ರತಿಯೊಬ್ಬ ಭಕ್ತರು ಮಠದ ಸಂಪತ್ತು, ಭಾವಿಸಿರುವ ಸಂಸ್ಥಾನ ಶ್ರೀ ಗವಿಮಠವು ಆಗಮಿಸಿದ ಭಕ್ತರಿಗೆ ಭಕ್ತಿಯ ಜೊತೆಗೆ ಅಕರ್ಷಣೆಯ ಅನಂದ ತುಂಬಲು ಶ್ರೀಮಠದ ಆವರಣವನ್ನು ಅಲಂಕರಿಸುತ್ತಿದೆ.
ಈಗಾಗಲೇ ಸುಂದರ ಮಹಾಮಂಟಪ ದ್ವಾರಬಾಗಿಲಿನ ಮುಂಭಾಗದ ಆವರಣ ಮಧ್ಯದಲ್ಲಿ ನಿರ್ಮಾಣಗೊಂಡಿದ್ದು, ಅದರ ಸುತ್ತಲೂ ಹಸಿರು ಹುಲ್ಲಿನ ಅಕರ್ಷಣೆ ಮಂಟಪವನ್ನು ಮತ್ತಷ್ಟು ಸುಂದರಗೊಳಿಸಿದೆ. ಶ್ರೀ ಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದ ಆವರಣ, ಶ್ರೀ ಗವಿಸಿದ್ಧೇಶ್ವರರ ಕರ್ತೃ ಗದ್ದುಗೆ ದರ್ಶನದ ಪ್ರವೇಶದ್ವಾರದ ಮುಂಭಾಗ, ನೂತನವಾಗಿ ನಿರ್ಮಾಣಗೊಂಡ ತೆಂಗಿನ ಕಾಯಿ ಒಡೆಯುವ ಮಂಟಪದ ಆವರಣ, ಕೆರೆಯ ಮುಂಭಾಗ, ದಾಸೋಹದ ಎದುರಿಗೆ ಇರುವ ಆವರಣ ಒಟ್ಟು ಒಂದುವರೆ ಲಕ್ಷ ಚದರ ಅಡಿಯ ವಿಶಾಲವಾದ ಅವರಣ ಹಸಿರಿನ ಹುಲ್ಲು ಹಾಸಿಗೆ ಸೊಬಗಿನಿಂದ ಕಂಗೊಳಿಸುತ್ತಿದೆ.
ಇವು ಎಲ್ಲವೂ ಶ್ರೀಮಠದ ಸೊಬಗು, ಸೌಂದರ್ಯ ದುಪ್ಪಟ್ಟು ಹೆಚ್ಚಿಸಿದೆ. ಎಲ್ಲ ಮಂಟಪಗಳು ಅಚ್ಚು ಮಲ್ಲಿಗೆಯ ಬಿಳುಪಿನ ಸುಂದರ ಕೆತ್ತನೆಗಳಾಗಿದ್ದು, ಒಟ್ಟು ಎರಡುವರೆ ಲಕ್ಷ ಚದರ ಅಡಿ ವಿಶಾಲವಾದ ನೆಲಹಾಸಿಗೆ ಶ್ರೀ ಮಠಕ್ಕೆ ಆಗಮಿಸಿದ ಭಕ್ತರ ಮನಸ್ಸು ಆಕರ್ಷಿಸುತ್ತಲಿದ್ದು, ಶ್ರೀ ಮಠಕ್ಕೆ ಆಗಮಿಸುವ ಭಕ್ತರಿಗೆ ಆನಂದದ ಜೊತೆಗೆ ಶ್ರೀಮಠದ ಆಕರ್ಷಣೆ ಹೆಚ್ಚಿಸಿವೆ. ಶ್ರೀ ಮಠದ ಸೌಚಿದರ್ಯ ಹೆಚ್ಚಿಸುವ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಸುಂದರ ಹೂ-ಗಿಡಗಳಿಂದ ಆವರಣ ಅಲಂಕೃತಗೊAಡಿರುವದು ಈ ವರ್ಷದ ಜಾತ್ರೆಯ ಕಳೆಯನ್ನು ಇನ್ನಷ್ಟು ಹೆಚ್ಚಿಸಲಿವೆ.
ಕಳೆದ ವರ್ಷದಿಂದಲೇ ಪೂರಕ ಕಾರ್ಯಗಳು ಆರಂಭವಾಗಿದ್ದು, ಪ್ರಸ್ತುತ ವರ್ಷದ ಶ್ರೀ ಮಠದ ಆವರಣವು ಹಸಿರು ಹಾಸಿಗೆಯಿಂದ ಸಂಪೂರ್ಣ ಶೃಂಗಾರಗೊAಡಿರುವುದು ವಿಶೇಷತೆಯಾಗಿದೆ. ಮುಖ್ಯ ರಸ್ತೆಯಿಂದ ಶ್ರೀ ಮಠದ ಆವರಣ ಪ್ರವೇಶಿಸುತ್ತಿದ್ದಂತೆ ಬಿಳಿ ಮತ್ತು ಕೆಂಪು ಕಲ್ಲಿನ ಸುಂದರವಾದ ಹಾಸಿಗೆ, ಎಡಕ್ಕೆ ಮತ್ತು ಬಲಕ್ಕೆ ಮಂಟಪಗಳು, ಎಡಬಾಗದ ಸಂಪೂರ್ಣ ಆವರಣದ ಸುಂದರವಾದ ತಡೆಗೋಡೆಗೆ ಹೊಂದಿಕೊAಡಿರುವ ಶ್ರೀ ಮಠದ ಕಾರ್ಯಾಲಯ, ಅದರ ಶಿಲಾನ್ಯಾಸ ಕಲ್ಪನೆ ನೋಡುಗರ ಆಕರ್ಷಣೆಯ ಕೇಂದ್ರವಾಗಿದೆ.