ಲಿಂಗಾಯತ ಧರ್ಮ ಒಂದು ಜಾತಿಗೆ ಮೀಸಲಾಗಿಲ್ಲ: ಡಾ. ಜಗದ್ಗುರು ತೋಂಟದ ಸಿದ್ಧರಾಮ ಮಹಾಸ್ವಾಮಿಗಳು

0
Spread the love

ವಿಜಯಸಾಕ್ಷಿ ಸುದ್ದಿ, ಡಂಬಳ: ಲಿಂಗಾಯತ ಧರ್ಮ ಪ್ರಾರಂಭದ ಬಗ್ಗೆ 900 ವರ್ಷಗಳ ಇತಿಹಾಸವಿದೆ ಮತ್ತು ಮಠಗಳ ಕಾರ್ಯಗಳ ಬಗ್ಗೆ 600 ವರ್ಷಗಳ ಇತಿಹಾಸ ಅಡಗಿರುವ ಲಿಂಗಾಯತ ಧರ್ಮ ಒಂದು ಜಾತಿಗೆ ಮೀಸಲು ಅಲ್ಲ. ಬಸವಾದಿ ಶರಣರು ಹಾಕಿಕೊಟ್ಟ ಜಾತಿ, ಮತ, ಪಂಥ ಹೊಡೆದೋಡಿಸುವ ವಿಶಿಷ್ಟ ಧರ್ಮ ಲಿಂಗಾಯತ ಧರ್ಮವಾಗಿದೆ ಎಂದು ಡಾ. ಜಗದ್ಗುರು ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

Advertisement

ಡಂಬಳ ಗ್ರಾಮದ ಆರಾಧ್ಯ ದೇವರಾದ ಜಗದ್ಗುರು ತೋಂಟದಾರ್ಯ ಶ್ರೀಮದರ್ಧನಾರೀಶ್ವರ ಮಠದ 285ನೇ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಲಿಂ.ಡಾ.ತೋಟದ ಸಿದ್ಧಲಿಂಗ ಮಹಾಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡುತ್ತಿದ್ದರು.

ಅಂದು ಅರ್ಧನಾರೀಶ್ವರರು ಎಲ್ಲವನ್ನೂ ಬಲ್ಲ ಶಿವಯೋಗಿಗಳಾಗಿದ್ದರು. ಅಷ್ಟೇ ಅಲ್ಲದೇ, ರಾಜ-ಮಹಾರಾಜರ ಸಂಸ್ಥಾನಿಕರ ಮೇಲೆ ಪ್ರಭಾವ ಬೀರಿದ ಮಹಾನ್ ಚೇತನರಾಗಿದ್ದರು. ನಾಡಿನ ಜಾತ್ರೆಗಳಲ್ಲೇ ತೋಂಟದಾರ್ಯ ಮಠದ ಜಾತ್ರೆಯು ವೈಚಾರಿಕ-ವೈಜ್ಞಾನಿಕ ನೆಲೆಗಟ್ಟಿನಲ್ಲಿ ನಡೆಯುವ ಅಪರೂಪದ ಜಾತ್ರೆಯಾಗಿದೆ. ಧರ್ಮ ಶ್ರದ್ಧೆಯಿಂದ, ವಿಶ್ವಾಸದಿಂದ ಜಾತ್ರಾ ಮಹೋತ್ಸವದ ಆಚರಣೆಗೆ ಭಕ್ತರು ಮುಂದಾಗಿರುವುದು ಪ್ರಶಂಸನೀಯ. ಗ್ರಾಮೀಣ ಕ್ರೀಡೆಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಜಾತ್ರಾ ಮಹೋತ್ಸದಲ್ಲಿ ನಿರಂತರವಾಗಿ ಜರಗಬೇಕು ಎಂದು ಹೇಳಿದರು.

ವೇದ ಮೂರ್ತಿ ರಾಜಶೇಖರಯ್ಯ ಹಿರೇಮಠ ಮಾತನಾಡಿ, 285ನೇ ಜಾತ್ರಾ ಮಹೋತ್ಸವವು ಮಘಾನಕ್ಷತ್ರದಲ್ಲಿ ಫೆ.13ರಂದು ಮಹಾರಥೋತ್ಸವ, ಫೆ.14ರಂದು ಲಘು ರಥೋತ್ಸವ ಜರುಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿ.ವಿ. ಹಿರೇಮಠ, ವಿ.ಎಸ್. ಯರಾಶಿ, ಮಹೇಶ ಗಡಗಿ, ರಾಮಣ್ಣ ಮೇಗಲಮನಿ, ಬಶೀರಹಮ್ಮದ ತಾಂಬೋಟಿ, ಮುರ್ತುಜಾ ಮನಿಯಾರ, ಸುರೇಶ ಗಡಗಿ, ಶರಣು ಬಂಡಿಹಾಳ, ಗವಿಸಿದ್ಧಪ್ಪ ಹಾದಿಮನಿ, ನಿಂಗಪ್ಪ ಮಳ್ಳನ್ನವರ, ಜಯಣ್ಣ ಜೋಳದ, ಸಿದ್ದಣನಗೌಡ ಜಾಯನಗೌಡ, ಯಲ್ಲಪ್ಪ ಸಂದಿಗವಾಡ, ಸಿದ್ಧಲಿಂಗಯ್ಯ ಭೂಸನೂರಮಠ, ಮುತ್ತಣ್ಣ ಕೊಂತಿಕಲ್ಲ, ಮಲ್ಲಪ್ಪ ರೇವಡಿ, ಮಲ್ಲಣ್ಣ ಗಡಗಿ, ವಿರೂಪಾಕ್ಷಪ್ಪ ಲಕ್ಕುಂಡಿ, ಬಸವರಾಜ ಹಮ್ಮಗಿ, ಅಶೋಕ ಮಾನೆ, ರಮೇಶ ಕೊರ್ಲಹಳ್ಳಿ, ಸಿದ್ದಯ್ಯ ಕಾಡಸಿದ್ದೇಶ್ವರಮಠ, ಈಶಣ್ಣ ಪಟ್ಟಣಶೆಟ್ಟರ ಸೇರಿದಂತೆ ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಇದ್ದರು.

ಜಾತ್ರಾ ಸಮಿತಿಯ ಅಧ್ಯಕ್ಷರಾಗಿ ಭೀಮಪ್ಪ ಗದಗಿನ, ಉಪಾಧ್ಯಕ್ಷರಾಗಿ ಯಲ್ಲಪ್ಪ ದಂಡಿನ, ಕಾರ್ಯದರ್ಶಿಯಾಗಿ ದುರಗಪ್ಪ ಹರಿಜನ, ಖಜಾಂಚಿ ಶರಣಪ್ಪ ಬಂಡಿ ಅವರು ಆಯ್ಕೆಯಾದರೆ, ದಾಸೋಹ ಸಮಿತಿ ಅಧ್ಯಕ್ಷ ಮರಿತೇಮಪ್ಪ ಆದಮ್ಮನವರ, ಉತ್ಸವ ಸಮಿತಿ ಅಧ್ಯಕ್ಷ ಬಸುರಾಜ ಶಿರೋಳ, ಪ್ರಚಾರ ಸಮಿತಿ ಅಧ್ಯಕ್ಷ ವಿಜಯ ಸೊರಟೂರ ಸೇರಿದಂತೆ ಎಲ್ಲಾ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಯಿತು.


Spread the love

LEAVE A REPLY

Please enter your comment!
Please enter your name here