ವಿಜಯಸಾಕ್ಷಿ ಸುದ್ದಿ, ಗದಗ: ಸಮೀಪದ ಅಡವಿಸೋಮಾಪೂರ ಸಣ್ಣ ತಾಂಡೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಗದುಗಿನ ಮೆ. ಜಯಂತಿ ಸ್ಟೇಷನರಿ ಮಾಲಿಕರಾದ ಪಂಕಜ ಬನ್ಸಾಲಿ, ನಿಕೇತನ ಬನ್ಸಾಲಿ ಇವರು ದಾನವಾಗಿ ನೀಡಿದ ಟೈ ಮತ್ತು ಬೆಲ್ಟ್ ಗಳನ್ನು ವಿತರಿಸಲಾಯಿತು.
ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮಾರುತಿ ಪವಾರ, ಸದಸ್ಯರಾದ ರಾಮಪ್ಪ ಲಮಾಣಿ, ರಮೇಶ್ ಲಮಾಣಿ, ಮುಖ್ಯ ಶಿಕ್ಷಕ ಮಲ್ಲೇಶ ಡಿ.ಎಚ್, ಶಿಕ್ಷಕರಾದ ಎಸ್.ಜಿ. ಅಮ್ಮಿನಭಾವಿ, ಪಿ.ಡಿ. ಕಿಲಬನವರ ದಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.



