ಹ್ಯಾಪಿ ನ್ಯೂ ಇಯರ್: ಹೊಸ ವರ್ಷವನ್ನು ಅದ್ದೂರಿ ವೆಲ್ ಕಮ್ ಮಾಡಿಕೊಂಡ ಬೆಂಗಳೂರಿಗರು!

0
Spread the love

ಬೆಂಗಳೂರು:- ಅಂತೂ ಇಂತೂ ಹೊಸವರ್ಷ ಬಂದೇ ಬಿಡ್ತು. ಈ ಕ್ಷಣಕ್ಕಾಗಿ ಎದುರು ನೋಡುತ್ತಿದ್ದ ಬೆಂಗಳೂರು ಮಂದಿಯ ಸಂತಸ ಮುಗಿಲು ಮುಟ್ಟಿದೆ. ಕರ್ನಾಟಕ ಜನತೆ 2025ನ್ನು ಕುಣಿದು ಕುಪ್ಪಳಿಸಿ ಚಿಯರ್ಸ್ ಹೇಳಿ ಸ್ವಾಗತಿಸಿದ್ದಾರೆ. ಇಡೀ ರಾಜ್ಯಾದ್ಯಂತ ನ್ಯೂ ಇಯರ್​​ ಸೆಲಬ್ರೇಷನ್​​ ನಡೆಯುತ್ತಿದ್ದು, ರಂಗು ರಂಗಿನ ಬೆಳಕಿನ ಮೂಲಕ ಬರಮಾಡಿಕೊಳ್ಳಲಾಗಿದೆ.

Advertisement

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೀಗಾಗಲೇ ಎಂಜಾಯ್ ಮೂಡ್ ನಲ್ಲಿರೋ ಯುವಕ, ಯುವತಿಯರು ರಸ್ತೆಗಳಲ್ಲಿ ಕುಣಿದು ಕುಪ್ಪಳಿಸಿದರು. ಪರಸ್ಪರ ಹೊಸ ವರ್ಷದ ಶುಭಾಶಯ ಕೋರಿದರು. ಹೊಸ ವರ್ಷದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಕೇಂದ್ರಗಳಾದ ಬೆಂಗಳೂರಿನ ಎಂ.ಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‍, ಇಂದಿರಾ ನಗರ, ಕೋರಮಂಗಲ ವರ್ಣರಂಜಿತವಾಗಿ ಮಿರಿ ಮಿರಿ ಮಿಂಚುತ್ತಿದ್ದವು.

ಬಾರ್, ಪಬ್‌ಗಳು ವಿಶೇಷ ಆಫರ್‌ ನೀಡಿದ್ದವು. ಪರಿಣಾಮ ಪಾನ ಪ್ರಿಯರು ರಾತ್ರಿಯಿಂದಲೇ ಪಾರ್ಟಿ ಮಾಡುತ್ತಾ ಡಿಜೆ ಹಾಡಿಗೆ ನೃತ್ಯ ಮಾಡುತ್ತಿದ್ದರು. ಇದರಿಂದ ಭರ್ಜರಿ ವ್ಯಾಪಾರವೂ ನಡೆಯಿತು. ಜಿಲ್ಲಾ ಕೇಂದ್ರ ಸ್ಥಳಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು.

ಬೇಕರಿಗಳಲ್ಲಿ ಹೊಸ ವರ್ಷದ ಕೇಕ್‌ಗಳಿಗೆ ಭಾರೀ ಬೇಡಿಕೆ ಇತ್ತು. ಬಡಾವಣೆಯ ಜನರು ರಾತ್ರಿ 12 ಗಂಟೆ ಆಗುತ್ತಿದ್ದಂತೆ ರಸ್ತೆಯಲ್ಲಿ ಕೇಕ್‌ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷವನ್ನು ಬರ ಮಾಡಿಕೊಂಡರು.

ಇನ್ನೂ ಬೆಂಗಳೂರಿನಲ್ಲಿ ಪೊಲೀಸರು ಟೈಟ್ ಸೆಕ್ಯೂರಿಟಿ ಮಾಡಿಕೊಂಡಿದ್ದರು. ಪೊಲೀಸರು ಇಲ್ಲ ಎಂದುಕೊಂಡರೂ ಚಲನವಲನ, ಕಿಡಿಗೇಡಿ ಕೆಲಸಗಳು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿವೆ.


Spread the love

LEAVE A REPLY

Please enter your comment!
Please enter your name here