ಸ್ಯಾಂಡಲ್ವುಡ್ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರು ಅಭಿಮಾನಿಗಳಿಗೆ ಸಿಹಿಸುದ್ದಿಯನ್ನು ನೀಡಿದ್ದಾರೆ. ಶಸ್ತ್ರಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗಿದ್ದ ಶಿವಣ್ಣ, ಶಸ್ತ್ರಚಿಕಿತ್ಸೆಯ ಬಳಿಕ ಇದೇ ಮೊದಲ ಬಾರಿಗೆ ವಿಡಿಯೋ ಮಾಡಿ ಅಭಿಮಾನಿಗಳಿಗೆ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಮೊದಲು ಗೀತಾ ಶಿವರಾಜ್ಕುಮಾರ್ ಮಾತನಾಡಿ,
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ನೀವೆಲ್ಲರೂ ಮಾಡಿದ ಪ್ರಾರ್ಥನೆಯಿಂದ ಶಿವರಾಜ್ಕುಮಾರ್ ಎಲ್ಲಾ ರಿಪೋರ್ಟ್ ನೆಗೆಟಿವ್ ಬಂತು. ಅವರೀಗ ಕ್ಯಾನ್ಸರ್ ಫ್ರೀ ಅಂತ ವೈದ್ಯರು ಅಫಿಷಿಯಲಿ ಹೇಳಿದ್ದಾರೆ. ನಿಮ್ಮೆಲ್ಲರ ಹಾರೈಕೆಯಿಂದ ಅವರು ಗುಣಮುಖರಾಗಿದ್ದಾರೆ. ಇದನ್ನೂ ನಾನು ಎಂದಿಗೂ ಮರೆಯೋದಿಲ್ಲ ಎಂದಿದ್ದಾರೆ.
ಬಳಿಕ ಶಿವಣ್ಣ ಮಾತನಾಡಿ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಭಯ ಆಗುತ್ತೆ ಮಾತನಾಡಬೇಕಾದರೆ, ಎಲ್ಲಿ ಎಮೋಷನಲ್ ಆಗಿ ಬಿಡ್ತೀನಿ ಅಂತ. ಇಲ್ಲಿಂದ ಹೋಗುವಾಗ ಎಮೋಷನಲ್ ಆಗಿದ್ದೇ, ಭಯ ಅನ್ನೋದು ಇದ್ದೇ ಇರುತ್ತದೆ. ಆ ಭಯ ಕಮ್ಮಿ ಮಾಡೋಕೆ ಎಂದೇ ಅಭಿಮಾನಿ ದೇವರುಗಳಿದ್ದಾರೆ.
ವೈದ್ಯರು ನನ್ನ ನೋಡಿಕೊಂಡ ರೀತಿಯಿಂದ ಇನ್ನಷ್ಟು ಧೈರ್ಯ ಬಂತು. ’45’ ಚಿತ್ರದ ಶೂಟಿಂಗ್ ಮಾಡುವಾಗ ಕಿಮೋ ಥೆರಾಫಿಯಲ್ಲಿ ಕೆಲಸ ಮಾಡಿದ್ದೀನಿ. ಕ್ಲೈಮ್ಯಾಕ್ಸ್ ಫೈಟ್ ಎಲ್ಲಾ ಮಾಡಿದ್ದೇನೆ. ಅಮೆರಿಕಗೆ ಚಿಕಿತ್ಸೆಗೆ ಹೊರಡುವ ಡೇಟ್ ಹತ್ತಿರ ಬಂದಾಗ ಸ್ವಲ್ಪ ಟೆನ್ಷನ್ ಜಾಸ್ತಿ ಆಯಿತು. ನನ್ನ ಪತ್ರಿ ಮತ್ತು ಮಗಳು ನಿವಿ ನನ್ನ ಜೊತೆ ಬೆಂಬಲವಾಗಿ ನಿಂತಿದ್ದಾರೆ.
ನನ್ನ ಚಿಕಿತ್ಸೆ ಮಾಡಿದ ವೈದ್ಯ ಮನೋಹರ್ ಅವರು ಮಗುವಿನಂತೆ ನನ್ನ ನೋಡಿಕೊಂಡರು. ಯೂರಿನರಿ ಬ್ಲಾಡ್ ತೆಗೆದು ಹೊಸದು ಬ್ಲಾಡ್ ಹಾಕಿದ್ದಾರೆ. ಯಾರು ಗಾಬರಿ ಆಗಬೇಡಿ ನಾನು ಆರಾಮ ಆಗಿದ್ದೇನೆ. ಐ ವಿಲ್ ಬಿ ಬ್ಯಾಕ್, ಡಬಲ್ ಪವರ್ನೊಂದಿಗೆ ಬರುತ್ತೇನೆ. ಎಲ್ಲಾ ನನ್ನ ಅಭಿಮಾನಿ ದೇವರುಗಳಿಗೂ ಧನ್ಯವಾದಗಳು ಎಂದು ಶಿವಣ್ಣ ಹೇಳಿದ್ದಾರೆ.