ಬೆಳಗಾವಿ: ಕಳೆದ ಒಂದೂವರೆ ವರ್ಷದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನಪರ ಕೆಲಸ ಮಾಡಿದೆ ಎಂದು ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ನಗರದಲ್ಲಿ ಮಾತನಾಡಿದ ಅವರು,
Advertisement
  
ಕಳೆದ ಒಂದೂವರೆ ವರ್ಷದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನಪರ ಕೆಲಸ ಮಾಡಿದೆ. ಬರುವ ದಿನಗಳಲ್ಲಿ ನಮ್ಮ ಸರ್ಕಾರದ ಮೇಲೆ ಜನರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇನ್ನೂ ಮೂರು ಬಜೆಟ್ ಮಂಡನೆ ಮಾಡಿ ಜನಪರ ಕೆಲಸ ಮಾಡುತ್ತೇವೆ ಎಂದರು.
ಇನ್ನೂ ಜಿಲ್ಲೆಯಲ್ಲಿ ಅನಾಹುತಕಾರಿ ಮಳೆಯಿಂದಾಗಿ ಬಹಳಷ್ಟು ಸೇತುವೆಗಳು ಶಿಥಿಲಗೊಂಡಿವೆ, ಅವುಗಳ ದುರಸ್ತಿ ಆಗಬೇಕಿದೆ, ಈ ಬಾರಿಯ ಬಿಜೆಟ್ ನಲ್ಲಿ ವಿಶೇಷ ಅನುದಾನ ಪಡೆಯುವ ಪ್ರಯತ್ನ ಮಾಡಿ ಬ್ರಿಜ್ ಗಳ ರಿಪೇರಿ ಕಾಮಗಾರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು ಎಂದು ಹೇಳಿದರು.


