ತುಮಕೂರು: ಬಿಸಿಯೂಟ ಅಡುಗೆ ಕೊಠಡಿಯಲ್ಲಿ ಅಡುಗೆ ಮಾಡುತ್ತಿದ್ದಾಗ ಕುಕ್ಕರ್ ಸ್ಫೋಟವಾದ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಪುರವರ ಪ್ರೌಢಶಾಲೆಯಲ್ಲಿ ಜರುಗಿದೆ. ಘಟನೆಯಲ್ಲಿ ಅಡುಗೆ ಮಾಡುತ್ತಿದ್ದ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.
Advertisement
ಅಡುಗೆ ಸಹಾಯಕಿ ಉಮಾದೇವಿ (52) ಗೆ ಗಂಭೀರ ಗಾಯವಾಗಿದ್ದು, ಜಯಮ್ಮ (55) ಎಂಬುವವರಿಗೆ ಸಣ್ಣಪುಟ್ಟ ಗಾಯವಾಗಿದೆ. ಹೊಸವರ್ಷದ ಹಿನ್ನೆಲೆ ಮಕ್ಕಳಿಗೆ ಪಲಾವ್ ಮತ್ತು ಪಾಯಸ ಮಾಡಲು ಹೋಗಿ ನಿನ್ನೆ ಮಧ್ಯಾಹ್ನದ ಬಿಸಿಯೂಟ ತಯಾರಿಸುವಾಗ ಈ ಅವಘಡ ಸಂಭವಿಸಿದೆ.
ಇನ್ನೂ ಗಂಭೀರವಾಗಿ ಗಾಯಗೊಂಡ ಅಡುಗೆ ಸಹಾಯಕಿ ಉಮಾದೇವಿಗೆ ಮಧುಗಿರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸುಮಾರು 30% ದೇಹಕ್ಕೆ ಗಾಯವಾಗಿದ್ದು ಗುಣಮಟ್ಟದ ಕುಕ್ಕರ್ ಕೊಡದೆ ಇರುವುದೇ ಘಟನೆಗೆ ಕಾರಣ ಎಂಬ ಆರೋಪ ಕೇಳಿ ಬಂದಿದೆ.
ಘಟನೆ ಸಂಬಂಧ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.