ಕೇಂದ್ರ ಸರ್ಕಾರದಿಂದ ಮನು ಭಾಕರ್ ಸೇರಿ ನಾಲ್ವರಿಗೆ ‘ಖೇಲ್ ರತ್ನ’ ಪ್ರಶಸ್ತಿ ಘೋಷಣೆ!

0
Spread the love

ನವದೆಹಲಿ: ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಮೇಜರ್ ಧ್ಯಾನ್ ಚಂದ ಖೇಲ್ ರತ್ನ ಪ್ರಶಸ್ತಿಗೆ ಹೆಸರನ್ನು ಆಯ್ಕೆ ಸಮಿತಿ ಅಂತಿಮಗೊಳಿಸಿದೆ. ಮನು ಭಾಕರ್ ಹಾಗೂ ವಿಶ್ವ ಚೆಸ್ ಚಾಂಪಿಯನ್​ಶಿಪ್​ ವಿಜೇತ ಡಾ ಗುಕೇಶ್​ ಜೊತೆ ಒಟ್ಟು ನಾಲ್ಕು ಕ್ರೀಡಾಪಟುಗಳಿಗೆ ಖೇಲ್ ರತ್ನ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.

Advertisement

ಜನವರಿ 17 ರಂದು ಈ ನಾಲ್ವರು ಕ್ರೀಡಾಪಟುಗಳೀಗೆ ಮೇಜರ್ ಧ್ಯಾನ್​ ಚಂದ್ ಖೇಲ್​ರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

ಮನು ಭಾಕರ್​ ಹಾಗೂ ಗುಕೇಶ್​ ಜೊತೆ ಭಾರತೀಯ ಪುರುಷರ ಹಾಕಿ ಟೀಂನ ನಾಯಕ ಹರ್ಮನ್​ಪ್ರೀತ್ ಸಿಂಗ್ ಹಾಗೂ ಪ್ಯಾರಾ ಒಲಿಂಪಿಯನ್ ಪ್ರವೀಣ್ ಕುಮಾರ್​ಗೂ ಕೂಡ ಈ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ.


Spread the love

LEAVE A REPLY

Please enter your comment!
Please enter your name here