ಕಳೆದ 10 ವರ್ಷಗಳಲ್ಲಿ ಆಪ್ ರಾಷ್ಟ್ರ ರಾಜಧಾನಿಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ: ಪ್ರಧಾನಿ ಮೋದಿ ಟೀಕೆ

0
Spread the love

ನವದೆಹಲಿ: ಕಳೆದ 10 ವರ್ಷಗಳಲ್ಲಿ ಆಪ್ ರಾಷ್ಟ್ರ ರಾಜಧಾನಿಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ. ಹಲಿಯಲ್ಲಿ ‘ಜುಗ್ಗಿ – ಜೋಪ್ರಿ’ ಕ್ಲಸ್ಟರ್‌ಗಳಿಗಾಗಿ 1,675 ಫ್ಲಾಟ್‌ಗಳು ಮತ್ತು ಎರಡು ನಗರ ಪುನರಾಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ನಂತರ ಮಾತನಾಡಿದ ಅವರು,

Advertisement

ಮೋದಿ ಯಾವತ್ತೂ ತಮಗಾಗಿ ಮನೆ ಕಟ್ಟಿಕೊಳ್ಳಲಿಲ್ಲ. ಆದರೆ ಬಡವರಿಗಾಗಿ 4 ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಿದ್ದಾರೆ ಎಂಬುದು ದೇಶಕ್ಕೆ ಚೆನ್ನಾಗಿ ತಿಳಿದಿದೆ. ನಾನು ಕೂಡ ನನಗಾಗಿ ಶಿಶ್ ಮಹಲ್ ನಿರ್ಮಿಸಿಕೊಳ್ಳಬಹುದಿತ್ತು. ಆದರೆ, ನಾನು ಹಾಗೆ ಮಾಡಲಿಲ್ಲ ಎಂದಿದ್ದಾರೆ.

ಕಳೆದ 10 ವರ್ಷಗಳಲ್ಲಿ ಆಪ್ ರಾಷ್ಟ್ರ ರಾಜಧಾನಿಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ ಎಂದು ನರೇಂದ್ರ ಮೋದಿ ಟೀಕಿಸಿದ್ದಾರೆ. ಎಎಪಿ ದೆಹಲಿಗೆ ಆಪತ್ತಾಗಿದೆ. ಮೊದಲು ಕಳ್ಳತನ ಮತ್ತು ದುರಹಂಕಾರವು ದೆಹಲಿಯನ್ನು ದುರಂತದಂತಹ ಪರಿಸ್ಥಿತಿಗೆ ತಳ್ಳಿತು.

ಕಳೆದ 10 ವರ್ಷಗಳಿಂದ ದೆಹಲಿಯು ದೊಡ್ಡ ದುರಂತದಿಂದ ಸುತ್ತುವರೆದಿದೆ. ಈ ದುರಂತ ಸರ್ಕಾರವು ದೆಹಲಿಯ ಅಭಿವೃದ್ಧಿಯನ್ನು ನಿಂತಲ್ಲಿಯೇ ನಿಲ್ಲಿಸಿದೆ. ನಾವು ದುರಂತವನ್ನು ಸಹಿಸುವುದಿಲ್ಲ, ನಾವು ಅದನ್ನು ಬದಲಾಯಿಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here