ಬೆಂಗಳೂರು: ಈ ಸರ್ಕಾರ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಸರ್ಕಾರ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದೆ. ಈ ಸರ್ಕಾರ ಬಂದ ದಿನದಿಂದ ಇದೇ ನಡೆಯುತ್ತಿರುವುದು ಎಂದರು.
ಇನ್ನೂ ಈ ಸರ್ಕಾರದ ಬಗ್ಗೆ ಬಹಳ ವಿಷಯ ಮಾತನಾಡೋದು ಇದೆ. ಒಂದು ವಾರ 10 ದಿನ ಕಳೆಯಲಿ ಮಾತನಾಡುತ್ತೇನೆ. ಸಂಕ್ರಾಂತಿ ಆಗಲಿ, ನಾನು ಎಲ್ಲಾ ವಿಷಯ, ರಾಜ್ಯದಲ್ಲಿ ನಡೆಯುತ್ತಿರೋ ಆಡಳಿತ, ಕಾನೂನು ವ್ಯವಸ್ಥೆ ಏನಾಗಿದೆ ಎಲ್ಲವೂ ಮಾತನಾಡುತ್ತೇನೆ ಎಂದರು.
ಅನಿವಾರ್ಯ ಇದ್ದಾಗ ಬೆಲೆ ಏರಿಕೆ ಮಾಡೋದು ಬೇರೆ. ಹಿಂದಿನ ಸರ್ಕಾರಗಳಲ್ಲಿ ಅನಿವಾರ್ಯ ಇದ್ದಾಗ ಬೆಲೆ ಏರಿಕೆ, ಕಡಿಮೆ ಮಾಡೋದು ಸಾಮಾನ್ಯ. ಆದರೆ ಇವರ ಬೆಲೆ ಏರಿಕೆ ಇವರೇ ಮೈ ಮೇಲೆ ಎಳೆದುಕೊಂಡಿರೋದು. ಕೆಇಬಿ ಮುಂದೆ ಏನು ಆಗುತ್ತದೋ ನೋಡೋಣ ಎಂದರು.