ತುಮಕೂರು:- ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಹಿನ್ನೆಲೆಯಲ್ಲಿ ಜಿಲ್ಲೆಯ ಮಧುಗಿರಿ ಡಿವೈಎಸ್ಪಿ ರಾಮಚಂದ್ರ ಅವರನ್ನು ಸಸ್ಪೆಂಡ್ ಮಾಡಲಾಗಿದೆ.
ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ದೂರು ನೀಡಲು ಬಂದ ಮಹಿಳೆಯನ್ನು ಪುಸಲಾಯಿಸಿ ರಾಸಲೀಲೆ ನಡೆಸಿದ ಆರೋಪದ ಮೇಲೆ ಡಿವೈಎಸ್ಪಿ ರಾಮಚಂದ್ರ ಅವರನ್ನು ಡಿಜಿ, ಐಜಿಪಿ ಅಲೋಕ್ ಮೋಹನ್ ಅಮಾನತು ಮಾಡಿ ಆದೇಶಿಸಿದ್ದರು. ಇದರ ಬೆನ್ನಲ್ಲೇ ಇದೀಗ ಡಿವೈಎಸ್ಪಿ ರಾಮಚಂದ್ರಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.
ಮಹಿಳೆ ನೀಡಿದ ದೂರಿನ ಮೇರೆಗೆ ಸೆಕ್ಸನ್ 68,75,79 ಅತ್ಯಾಚಾರ ಕೇಸ್ ಅಡಿಯಲ್ಲಿ ಮಧುಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ದೂರಿನ ಮೇರೆಗೆ ಇದೀಗ ಮಧುಗಿರಿ ಉಪವಿಭಾಗ ಡಿವೈಎಸ್ ಪಿ ರಾಮಚಂದ್ರಪ್ಪನನ್ನು ಅರೆಸ್ಟ್ ಮಾಡಲಾಗಿದೆ.
ಘಟನೆ ಹಿನ್ನೆಲೆ:-
ಜಮೀನು ವಿಚಾರವಾಗಿ ಮಹಿಳೆಯು ದೂರು ನೀಡಿದ್ದರು. ವಿಚಾರಣೆಗೆ ಎಂದು ಕರೆಯಿಸಿಕೊಂಡ ಡಿವೈಎಸ್ಪಿ ಅವರು ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು. ಕೆಲದಿನಗಳ ಹಿಂದೆಯೇ ಈ ಕೃತ್ಯವೆಸಗಿದ್ದು, ನಿನ್ನೆ ವಿಡಿಯೋ ವೈರಲ್ ಆಗಿತ್ತು. ಸದ್ಯ ಸಸ್ಪೆಂಡ್ ಆಗಿ ಇಲಾಖಾ ವಿಚಾರಣೆಗೆ ಒಳಪಡಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.