ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಹೊಸ ಬಸ್ ನಿಲ್ದಾಣದಲ್ಲಿ ಪೆಟ್ರೋಲ್ ಪಂಪ್ ಪ್ರಾರಂಭಿಸುತ್ತಿರುವ ಬಗ್ಗೆ ತಿಳಿದು ಬಂದಿದ್ದು, ಈ ನಿಲ್ದಾಣದಲ್ಲಿ ಪ್ರತಿನಿತ್ಯ ನೂರಾರು ಬಸ್ಸುಗಳು ಹಾಗೂ ಸಾವಿರಾರು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಪೆಟ್ರೋಲ್ ಪಂಪ್ ಪ್ರಾರಂಭಿಸುತ್ತಿರುವುದರಿAದ ಸಾಕಷ್ಟು ತೊಂದರೆಯಾಗುತ್ತವೆ. ಸಾರ್ವಜನಿಕರ ಹಿತದೃಷ್ಟಿಯಿಂದ ಪೆಟ್ರೋಲ್ ಪಂಪ್ ಬದಲಾಗಿ ಸಾರ್ವಜನಿಕ ಉಪಯುಕ್ತವಾಗುವಂತಹ ಮಳಿಗೆಗಳನ್ನು ನಿರ್ಮಿಸಿ ಅನುಕೂಲ ಮಾಡಿಕೊಡಬೇಕೆಂದು ಗದಗ ಜಿಲ್ಲಾ ಚೇಂಬರ್‌ನ ಅಧ್ಯಕ್ಷ ತಾತನಗೌಡ ಎಸ್.ಪಾಟೀಲ ಇವರ ನಿಯೋಗದೊಂದಿಗೆ ಗದಗ ಜಿಲ್ಲಾಧಿಕಾರಿಗಗಳು ಹಾಗೂ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಡಿ.ಎಂ. ದೇವರಾಜು ಅವರಿಗೆ ಮನವಿ ಸಲ್ಲಿಸಿದರು.
ನಿಯೋಗದಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷ ಶೇಖಣ್ಣ ಫ.ಗದ್ದಿಕೇರಿ, ಉಪಾಧ್ಯಕ್ಷ ವಿಜಯಕುಮಾರ ಎಸ್.ಮಾಟಲದಿನ್ನಿ, ಸಹ ಗೌರವ ಕಾರ್ಯದರ್ಶಿ ಸೋಮನಾಥ ಕೆ.ಜಾಲಿ, ಕೋಶಾಧ್ಯಕ್ಷ ಸಂಜಯ ಸಿ.ಬಾಗಮಾರ ಉಪಸ್ಥಿತರಿದ್ದರೆಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಅಶೋಕಗೌಡ ಕೆ.ಪಾಟೀಲ ತಿಳಿಸಿದ್ದಾರೆ.