ವಿಜಯಸಾಕ್ಷಿ ಸುದ್ದಿ, ಬೆಟಗೇರಿ: ಇಲ್ಲಿನ ಹುಯಿಲಗೋಳ ರಸ್ತೆಯ ಗೌರಿಗುಡಿ ಓಣಿಯಲ್ಲಿರುವ ಶ್ರೀ ಗೌರಿ ಗಣೇಶ ಶಿಕ್ಷಣ ಸಂಸ್ಥೆಯ 14ನೇ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಪಾರಿತೋಷಕ ವಿತರಣಾ ಕಾರ್ಯಕ್ರಮವು ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಕಾಶ ಮ್ಯಾಗೇರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗಂಗಾಧರ ಹಿರೇಮಠ, ಗಂಗಣ್ಣ ಮಲ್ಲಾಡದ, ಭರತ ಕಂಭಂ, ವಿರೂಪಾಕ್ಷಪ್ಪ ಹರ್ಲಾಪೂರ, ರವಿ ಕುಂದಗೋಳ, ಮಂಜುನಾಥ ಬೆಂತೂರ ಮತ್ತು ಸಾವಿತ್ರಿ ಗೋಡಿ ಪಾಲ್ಗೊಂಡಿದ್ದರು.
Advertisement
ಮಲ್ಲಿಕಾರ್ಜುನ ಐಲಿ, ರಾಜು ಹುನಕುಂಟಿ, ನಗರಸಭೆಯ ಸದಸ್ಯರಾದ ಶಕುಂತಲಾ ಅಕ್ಕಿ, ಮಹೇಶ ಕರಬಿಷ್ಠಿ ಮಾತನಾಡಿದರು. ಬಸವರಾಜ ಕುಂದಗೋಳ ಸ್ವಾಗತಿಸಿದರು. ಸತೀಶ ಕುಂದಗೋಳ, ಶ್ರೀನಿವಾಸ ಹಡಪದ ಕಾರ್ಯಕ್ರಮ ನಿರೂಪಿಸಿದರು. ಶಿವಣ್ಣ ನಾಗರಾಳ ವಂದಿಸಿದರು.