HomeGadag Newsಪು.ಬಡ್ನಿ ವ್ಯಾಪ್ತಿಯ ಲಕ್ಮೇಶ್ವರ-ದೇವಿಹಾಳ ಜಿಲ್ಲಾ ಮುಖ್ಯ ರಸ್ತೆಯ ಸೇತುವೆ ದುರಸ್ಥಿ ಕಾಮಗಾರಿಗೆ ಚಾಲನೆ

ಪು.ಬಡ್ನಿ ವ್ಯಾಪ್ತಿಯ ಲಕ್ಮೇಶ್ವರ-ದೇವಿಹಾಳ ಜಿಲ್ಲಾ ಮುಖ್ಯ ರಸ್ತೆಯ ಸೇತುವೆ ದುರಸ್ಥಿ ಕಾಮಗಾರಿಗೆ ಚಾಲನೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಕ್ಷೇತ್ರ ವ್ಯಾಪ್ತಿಯಲ್ಲಿ ಅನೇಕ ಕಾಮಗಾರಿಗಳ ಬಗ್ಗೆ ಬೇಡಿಕೆಯಿದ್ದು, ಅವುಗಳನ್ನು ಹಂತ ಹಂತವಾಗಿ ಈಡೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವದು. ಅಲ್ಲದೆ ಯಾವುದೇ ಕಾಮಗಾರಿಗಳು ನಡೆದರೂ ಸಹ ಅವುಗಳ ಗುಣಮಟ್ಟಕ್ಕೆ ಆದ್ಯತೆ ನೀಡಿ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಅವರು ತಾಲೂಕಿನ ಪು.ಬಡ್ನಿ ವ್ಯಾಪ್ತಿಯ ಲಕ್ಮೇಶ್ವರ -ದೇವಿಹಾಳ ಜಿಲ್ಲಾ ಮುಖ್ಯ ರಸ್ತೆಯ ಕಿ.ಮೀ 8.70ರಲ್ಲಿರುವ ಸೇತುವೆ ದುರಸ್ಥಿ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಈ ಭಾಗದಲ್ಲಿನ ಮುಖ್ಯ ರಸ್ತೆಯಲ್ಲಿರುವ ಸೇತುವೆ ಮಳೆಯಿಂದ ಹದಗೆಟ್ಟು ಹೋಗಿದ್ದು, ಇದರ ಹಾಗೂ ಈ ರಸ್ತೆ ಸುಧಾರಣೆಗೆ ಬೇಡಿಕೆ ಇತ್ತು. ಇದೀಗ 85 ಲಕ್ಷ ರೂಗಳ ವೆಚ್ಚದಲ್ಲಿ ಸೇತುವೆ ದುರಸ್ತಿ ಕಾಮಗಾರಿಯನ್ನು ಪ್ರಾರಂಭಿಸಲಾಗುತ್ತಿದೆ. ಈಗಾಗಲೇ ಲಕ್ಷೆö್ಮÃಶ್ವರ-ಗದಗ ಪ್ರಮುಖ ರಸ್ತೆಯಲ್ಲಿ ಆಗಬೇಕಾಗಿರುವ ದುರಸ್ಥಿ ಕಾಮಗಾರಿಗೆ ಒಟ್ಟು 8 ಕೋಟಿ ರೂ ಅನುದಾನ ಮಂಜೂರಿಯಾಗಿದ್ದು, ಇಷ್ಟರಲ್ಲಿಯೇ ಕಾಮಗಾರಿ ಪ್ರಾರಂಭವಾಗಲಿದೆ. ತೊಳಲಿ ರಸ್ತೆಗೆ 1 ಕೋಟಿ ರೂ ಮಂಜೂರಿಯಾಗಿದ್ದು, ಅದನ್ನು ಸಹ ಪ್ರಾರಂಭಿಸಲಾಗುವದು ಎಂದರು.

ಬೆಳಗಾವಿ ಅಧಿವೇಶನದಲ್ಲಿ ನೂತನ ತಾಲೂಕಾ ಕೇಂದ್ರಕ್ಕೆ ಅವಶ್ಯಕ ಕಚೇರಿಗಳಿಗಾಗಿ ಪ್ರಜಾಸೌಧಕ್ಕಾಗಿ ಬೇಡಿಕೆ ಇಟ್ಟಿದ್ದು, ಈ ಹಿನ್ನೆಲೆಯಲ್ಲಿ ಲಕ್ಮೇಶ್ವರ ತಾಲೂಕಿನ ಮಿನಿ ವಿಧಾನಸೌಧಕ್ಕಾಗಿ 8.60 ಕೋಟಿ ರೂ ವೆಚ್ಚದಲ್ಲಿ ಪ್ರಜಾಸೌಧ ನಿರ್ಮಾಣಕ್ಕಾಗಿ ಪಟ್ಟಣದ ದೊಡ್ಡೂರು ರಸ್ತೆಯಲ್ಲಿನ ಜಾಗೆಯನ್ನು ಗುರುತಿಸಲಾಗಿದೆ. ಅದರ ಕಾಮಗಾರಿಯನ್ನು ಸಹ ಪ್ರಾರಂಭಿಸಲಾಗುವದು. ಹೀಗೆ ಹತ್ತು ಹಲವಾರು ಕಾಮಗಾರಿಗಳನ್ನು ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ಹೈಸ್ಕೂಲ್, ಪ್ರಾಥಮಿಕ ಶಾಲಾ ಕೊಠಡಿ ನಿರ್ಮಾಣಕ್ಕೆ 90 ಲಕ್ಷ ರೂಗಳ ಟೆಂಡರ್ ಸಹ ಆಗಿದೆ ಎಂದರು.

ಕಾರ್ಯಕ್ರಮದಲ್ಲಿ ಪು.ಬಡ್ನಿ ಗ್ರಾ.ಪಂ ಅಧ್ಯಕ್ಷರಾದ ಪ್ರೇಮವ್ವ ಹರಿಜನ, ಮುಖಂಡರಾದ ಸುಭಾಸ ಬಟಗುರ್ಕಿ, ಶೇಖಣ್ಣ ಕರಿಯಣ್ಣವರ, ಅಶೋಕ ಬಟಗುರ್ಕಿ, ಪರಮೇಶರಪ್ಪ ಬಟಗುರ್ಕಿ, ವಾಗೀಶ ಬಟಗುರ್ಕಿ, ಮುತ್ತಣ್ಣ ಚೋಟಗಲ್, ಬಿ.ಬಿ. ಬಟಗುರ್ಕಿ, ಶಿವಾನಂದ ಹರಿಜನ, ಕಲ್ಲಪ್ಪ ಹಡಪದ, ಹೂಗಾರ, ಪರಮೇಶ್ವರಪ್ಪ ಚೋಟಗಲ್, ಅಶೋಕ ಮರಿಹೊಳಣ್ಣವರ, ಪ್ರಶಾಂತ ಹೊಸಮನಿ, ಕಿರಣ ಮಹಾಂತಶೆಟ್ಟರ, ರಾಜು ಚೋಟಗಲ್, ವಿಶಾಲ ಬಟಗುರ್ಕಿ, ತಾ.ಪಂ ಇಓ ಕೃಷ್ಣಪ್ಪ ಧರ್ಮರ, ಲೋಕೋಪಯೋಗಿ ಇಲಾಖೆ ಎಇಇ ಫಕ್ಕೀರೇಶ, ಎಇ ಮಹೇಶ ಅಥಣಿ, ಪಿಡಿಓ ಬಿ.ಬಿ ಬಳೂಟಗಿ ಸೇರಿದಂತೆ ಅನೇಕರು ಹಾಜರಿದ್ದರು.

ಶಿರಹಟ್ಟಿಯಲ್ಲಿ ತಾಲೂಕಾಸ್ಪತ್ರೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಕ್ಷೇತ್ರದ ಪ್ರಮುಖ ರಸ್ತೆಗಳ ಸುಧಾರಣೆ, ಲಕ್ಮೇಶ್ವರ ತಾಲೂಕಾ ಆಸ್ಪತ್ರೆ ನಿರ್ಮಾಣಕ್ಕೂ ಬೇಡಿಕೆ ಇಡಲಾಗುವದು. ಕ್ಷೇತ್ರದಲ್ಲಿ ನಡೆಯುವ ಎಲ್ಲ ಕಾಮಗಾರಿಗಳು ಗುಣಮಟ್ಟದ ಕಾಮಗಾರಿಗಳಾಗಬೇಕು. ಗುತ್ತಿಗೆದಾರರು ವಿಶೇಷ ಆಸಕ್ತಿಯಿಂದ ಕಾಮಗಾರಿ ನಡೆಸಿ ಎಂದು ಶಾಸಕ ಡಾ. ಚಂದ್ರು ಲಮಾಣಿ ಸಲಹೆ ನೀಡಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!