ಚೈತ್ರಾ ಕುಂದಾಪುರ-ರಜತ್ ಕಿಶನ್ ಮಾತಿನ ಚಕಮಕಿ: ಚೈತ್ರಾ ಸುಳ್ಳಿ.. ಸುಳ್ಳಿ ಎಂದ ಕ್ಯಾಪ್ಟನ್

0
Spread the love

ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ‘ಬಿಗ್​ ಬಾಸ್​​ ಕನ್ನಡ ಸೀಸನ್​ 11’ ಫಿನಾಲೆ ಹೊಸ್ತಿಲಿನಲ್ಲಿದೆ. ಬಿಗ್ ಬಾಸ್​ ಫಿನಾಲೆಗೆ ಇನ್ನು ಮೂರು ವಾರ ಉಳಿದುಕೊಂಡಿದೆ. ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ಜೋರಾಗಿದೆ. ಈ ವಾರ ಸ್ಪರ್ಧಿಗಳಿಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆ. ಈ ವಾರ ಗೆಲ್ಲುವ ಸ್ಪರ್ಧಿಗಳು ನೇರವಾಗಿ ಫಿನಾಲೆ ಟಿಕೆಟ್ ಪಡೆಯಲಿದ್ದಾರೆ. ಈ ಬಗ್ಗೆ ಸುದೀಪ್ ಘೋಷಣೆ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ಕಿತ್ತಾಟ ಜೋರಾಗಿದೆ.

Advertisement

ಹೌದು ಚೈತ್ರಾ ಕುಂದಾಪುರ ಮತ್ತು ರಜತ್ ಕಿಶನ್ ಕಿತ್ತಾಡಿದ್ದಾರೆ. ಮಾತಿನಲ್ಲಿಯೇ ಪರಸ್ಪರ ಟೀಕಿಸಿದ್ದಾರೆ. 50 ದಿನ ಆದ್ಮೇಲೆ ಬಂದಿದ್ದೀರಾ? ನಿಮ್ಮ ಲಕ್ ಚೆನ್ನಾಗಿದೆ ಅನ್ನೋ ಅರ್ಥದಲ್ಲಿಯೇ ಚೈತ್ರಾ ಕುಂದಾಪುರ ಹೇಳ್ತಾರೆ. ಆದರೆ, ಇದಕ್ಕೆ ಪ್ರತಿಯಾಗಿಯೇ ರಜತ್ ಕಿಶನ್ ಒಂದು ಮಾತು ಹೇಳ್ತಾರೆ. ನಾನು ಲೇಟ್ ಆಗಿಯೇ ಬಂದದ್ದೇನೆ. ನಿಮ್ಮ ಲಕ್ ಚೆನ್ನಾಗಿದೆ. ಒಂದು ವೇಳೆ ಮೊದಲೇ ಬಂದಿದ್ದರೇ, ನಾಲ್ಕೇ ವಾರಕ್ಕೆ ನಿಮನ್ನ ಮನೆಗೆ ಕಳಿಸುತ್ತಿದ್ದೆ ಅಂತಲೇ ರಜತ್ ಕಿಶನ್ ಹೇಳಿದ್ದಾರೆ.

50 ದಿನ ಆದಮೇಲೆ ಬಂದಿದ್ದೇನೆ ಎಂದರೆ ಅದು ನಿಮ್ಮ ಅದೃಷ್ಟ. ನಾನು ಆರಂಭದಲ್ಲೇ ಬಂದಿದ್ದೇ ಅಂದರೆ ನಿಮ್ಮನ್ನ ಈಗಾಗಲೇ ಮನೆಗೆ ಕಳಿಸಿಬಿಡುತ್ತಿದ್ದೆ ಎಂದು ರಜತ್ ಹೇಳಿದ್ದಾರೆ. ಈ ಮಧ್ಯೆ ಇಬ್ಬರ ಮಧ್ಯೆ ಬಿಗ್ ಟಾಕ್ ವಾರ್ ನಡೆದಿದ್ದು ಚೈತ್ರಾ ಅವರನ್ನು ಸುಳ್ಳಿ.. ಸುಳ್ಳಿ.. ಸುಳ್ಳಿ.. ಎಂದು ರಜತ್ ಅವರು ಕರೆದು ಕಿಚಾಯಿಸಿದ್ದಾರೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ.

 


Spread the love

LEAVE A REPLY

Please enter your comment!
Please enter your name here