ಬೆಂಗಳೂರು:- ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಜಿಮ್ ಸೋಮನ ವಿರುದ್ದ ಎಫ್ ಐ ಆರ್ ದಾಖಲಾಗಿದೆ.
Advertisement
ಯುವತಿಯೊಬ್ಬಳಿಗೆ ಸಾಲ ಕೊಡುವುದಾಗಿ ನಗರದ ಲ್ಯಾಂಗ್ ಪೋರ್ಡ್ ರಸ್ತೆಯಲ್ಲಿರುವ ಹೋಟೆಲ್ ಗೆ ಕರೆಸಿ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿದೆ. ಘಟನೆ ಸಂಬಂಧ ಅಶೋಕನಗರ ಠಾಣೆಯಲ್ಲಿ ಯುವತಿ ದೂರು ಸಲ್ಲಿಸಿದ್ದಾರೆ. ಯುವತಿ ದೂರಿನ ಅನ್ವಯ ಆರೋಪಿ ವಿರುದ್ಧ FIR ದಾಖಲಾಗಿದೆ.
ಬಿಜೆಪಿಯಿಂದ ಈ ಹಿಂದೆ ಸಕಲೇಶಪುರ ವಿಧಾನಸಭಾ ಚುನಾವಣೆಗೆ ಜಿಮ್ ಸೋಮ ಸ್ಪರ್ಧಿಸಿದ್ದ. ಜಿಮ್ ಸೋಮನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
ಸದ್ಯ ಅಶೋಕನಗರ ಪೊಲೀಸರಿಂದ ತನಿಖೆ ಮುಂದುವರಿದಿದೆ.