ಬೆಂಗಳೂರು: ಅನುಮತಿ ಇಲ್ಲದೇ ರಮ್ಯಾ ಅವರ ದೃಶ್ಯಗಳನ್ನು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ ಎಂಬ ಆರೋಪ ಇದೆ. ಇದಕ್ಕೆ ಸಂಬಂಧಿಸಿದಂತೆ ಕೇಸ್ ವಿಚಾರಣೆಗಾಗಿ ನಟಿ ರಮ್ಯಾ ವಾಣಿಜ್ಯ ಕೋರ್ಟ್ಗೆ ಆಗಮಿಸಿದ್ದಾರೆ.
Advertisement
ಬರೋಬ್ಬರಿ 7 ವರ್ಷಗಳ ನಂತರ ನಟಿ ರಮ್ಯಾ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದ ಪ್ರೊಮೋಷನಲ್ ವಿಡಿಯೋನಲ್ಲೂ ರಮ್ಯಾ ನಟಿಸಿದ್ದರು. ಆದರೆ ಸಿನಿಮಾ ಟ್ರೈಲರ್ ರಿಲೀಸ್ ಆದಮೇಲೆ ನಟಿ ರಮ್ಯಾಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಚಿತ್ರತಂಡದವರು ವಿಚಾರಣೆಗೆ ಬಂದಿಲ್ಲ ಎಂಬ ಮಾಹಿತಿ ಇದೆ. ರಮ್ಯಾ ಅವರು ಸಾಕ್ಷಿ ತಂದಿದ್ದಾರೆ.