ಯುಪಿಎಸ್‌ಸಿ ರ‌್ಯಾಂಕ್ ಪಡೆದ ಯಲ್ಲಪ್ಪರಿಗೆ ಸನ್ಮಾನ

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಇತ್ತೀಚೆಗೆ (ಕೇಂದ್ರ ಲೋಕಸೇವಾ ಆಯೋಗದ) ಯುಪಿಎಸ್‌ಸಿ ಪರೀಕ್ಷೆಯಲ್ಲಿ 343ನೇ ರ‌್ಯಾಂಕ್ ಪಡೆದ ಶಿರಹಟ್ಟಿಯ ಯಲ್ಲಪ್ಪ ಗೋಶಲ್ಯನವರ ಅವರಿಗೆ ಗಂಧದ ಗುಡಿ ಬಳಗ, ಕರ್ನಾಟಕ ಪ್ರಜಾಪರ ವೇದಿಕೆ, ಜಿಲ್ಲಾ ಮಾಧ್ಯಮಿಕ ಶಾಲಾ ಸಂಘದ ವತಿಯಿಂದ ಸನ್ಮಾನಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಂ.ಕೆ. ಲಮಾಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಡಿ. ಮಾಗಡಿ, ಶಿರಹಟ್ಟಿ ಪಟ್ಟಣದ ಯಲ್ಲಪ್ಪ ಗೋಶಲ್ಯನವರ ಸತತ ಪರಿಶ್ರಮ, ನಿರಂತರ ಅಧ್ಯಯನದಿಂದ ಈ ಸಾಧನೆ ಮಾಡಿ ಉನ್ನತ ಹುದ್ದೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದು, ಪಟ್ಟಣಕ್ಕೆ ಹಾಗೂ ತಾಲೂಕಿಗೆ ಕೀತಿಯನ್ನು ತಂದು ಇತರರಿಗೆ ಮಾದರಿಯಾಗಿದ್ದಾರೆ ಎಂದರು.

ಗಂಧದ ಗುಡಿ ಬಳಗದ ರಾಜ್ಯ ಕಾರ್ಯಕಾರಿಣಿ ಸಮಿತಿ ಅಧ್ಯಕ್ಷ ಹಸನ ತಹಸೀಲ್ದಾರ, ಪಟ್ಟಣ ಪಂಚಾಯತ ಸದಸ್ಯ ಸಂದೀಪ ಕಪ್ಪತ್ತನವರ, ಮಂಜುನಾಥ ಘಂಟಿ, ತಿಪ್ಪಣ್ಣ ಕೊಂಚಿಗೇರಿ, ಬುಡನಶ್ಯಾ ಮಕಾನದಾರ, ರವಿ ಗುಡಿಮನಿ, ಹರೀಶ್, ರಾಜಶೇಖರ ಅಕ್ಕಿ, ಅಕ್ಬರಸಾಬ ಯಾದಗಿರಿ, ಪ್ರವೀಣ ಹಡಪದ, ಮಾಬುಸಾಬ ಲಕ್ಮೇಶ್ವರ, ಸಂಜೀವ ಪೋತರಾಜ, ರಿಯಾಜ ತಹಸೀಲ್ದಾರ, ಶ್ರೀನಿವಾಸ ಬಾರಬಾರ, ಆನಂದ ಕೊಡ್ಲಿ, ಶರೀಫ ಗುಡಿಮನಿ, ಸಿದ್ದಪ್ಪ ಶಿರಹಟ್ಟಿ, ಈರಣ್ಣ ಚಿಕ್ಕತೋಟದ, ಸತೀಶ ನರಗುಂದ, ಅನಿಲ ಗುಡಿಮನಿ ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here