ಫೆ. 5ರಂದು ವೀರಪ್ಪಜ್ಜನವರ ಪುಣ್ಯಾರಾಧನಾ ಶತಮಾನೋತ್ಸವ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಇಲ್ಲಿನ ಕೋಡಿಕೊಪ್ಪದ ಶ್ರೀ ಹುಚ್ಚೀರೇಶ್ವರರ ಪುಣ್ಯಾರಾಧನಾ ಶತಮಾನೋತ್ಸವವನ್ನು ಫೆಬ್ರುವರಿ 5ರಂದು ಆಚರಿಸಲು ಭಕ್ತರ ಸಭೆಯಲ್ಲಿ ತೀರ್ಮಾನಿಸಲಾಯಿತು. ಇದಕ್ಕೆ ಪೂರಕವಾಗಿ ಜ.30ರಿಂದ ಶ್ರೀ ವೀರಪ್ಪಜ್ಜನವರ ಪುರಾಣವನ್ನು ಪ್ರಾರಂಭಿಸಲು ಸಭೆ ತೀರ್ಮಾನಿಸಿತು.

Advertisement

ಪುರಾಣದ ಉದ್ಘಾಟನೆಯನ್ನು ಮುಂಡರಗಿಯ ಶ್ರೀ ಅನ್ನದಾನೇಶ್ವರ ಮಠದ ನಾಡೋಜ ಶ್ರೀ ಅನ್ನದಾನ ಮಹಾಸ್ವಾಮಿಗಳವರು ನೆರವೇರಿಸಲು, ನಿಡಗುಂದಿಕೊಪ್ಪದ ಶ್ರೀ ಅಭಿನವ ಚನ್ನಬಸವ ಶ್ರೀಗಳು, ಯಲಬುರ್ಗಾದ ಶ್ರೀ ಸಿದ್ದರಾಮ ಶಿವಾಚಾರ್ಯರ ಉಪಸ್ಥಿತಿಯಲ್ಲಿ ರೋಣ ಬೂದೀಶ್ವರ ಮಠದ ಡಾ. ವಿಶ್ವನಾಥ ಮಹಾಸ್ವಾಮಿಗಳು ಪುರಾಣ ಪ್ರಾರಂಭಿಸಲು ನಿರ್ಧರಿಸಲಾಯಿತು.

ಫೆಬ್ರುವರಿ 5ರಂದು ಮಧ್ಯಾಹ್ನ 3ಕ್ಕೆ ಉದ್ಘಾಟನೆಗೊಳ್ಳಲಿರುವ ಶತಮಾನೋತ್ಸವದ ಸಂದರ್ಭದಲ್ಲಿ ಹಾಲಕೆರೆಯ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು, ಭೈರನಹಟ್ಟಿ ದೊರೆಸ್ವಾಮಿ ಮಠದ ಶಾಂತಲಿಂಗ ಶ್ರೀಗಳು, ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಮತ್ತು ರೋಣ ಶಾಸಕ ಜಿ.ಎಸ್. ಪಾಟೀಲ ಸೇರಿದಂತೆ ಗಣ್ಯರು ಉಪಸ್ಥಿತರಿರುತ್ತಾರೆ.

ಫೆಬ್ರುವರಿ 6ರಂದು 5 ಜೊತೆ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದ್ದು, ಅಂದು ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು, ಹಂಪಸಾಗರದ ಶ್ರೀ ರುದ್ರಮುನಿ ಶಿವಲಿಂಗೇಶ್ವರ ಶಿವಾಚಾರ್ಯರು, ಬಳ್ಳಾರಿಯ ಕಲ್ಯಾಣ ಶ್ರೀಗಳು ಮತ್ತು ಬಿಸರಳ್ಳಿಯ ಸಿದ್ದೇಶ್ವರ ಶಿವಾಚಾರ್ಯರು ಉಪಸ್ಥಿತರಿರುತ್ತಾರೆ.

ಫೆಬ್ರುವರಿ 7ರಂದು ಬೆಳಗ್ಗೆ 11ಕ್ಕೆ ಶತಮಾನೋತ್ಸವದ ಮುಕ್ತಾಯ ಸಮಾರಂಭದಲ್ಲಿ ಶಿರಹಟ್ಟಿಯ ಶ್ರೀ ದಿಂಗಾಲೇಶ್ವರ ಶ್ರೀಗಳವರು, ಅಬ್ಬಿಗೇರಿಯ ಶ್ರೀ ವೀರಭದ್ರ ಶಿವಾಚಾರ್ಯರು, ನರೇಗಲ್ಲದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು, ನಂದಿವೇರಿ ಮಠದ ಶ್ರೀಗಳು, ಸಂಸದ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಕಳಕಪ್ಪ ಬಂಡಿ, ಹಾಲಪ್ಪ ಆಚಾರ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮುಖಂಡ ರವಿ ದಂಡಿನ ಉಪಸ್ಥಿತರಿರುವರು.

ಅಂದು ಸಂಜೆ ಶ್ರೀ ವೀರಪ್ಪಜ್ಜನವರ ಪುರಾಣಕ್ಕೆ ಮಂಗಲ ಜರುಗಿದ ನಂತರ ಶ್ರೀ ವೀರಪ್ಪಜ್ಜನವರ ಮಹಾ ರಥೋತ್ಸವವನ್ನು ಭಕ್ತರ ಸಮ್ಮುಖದಲ್ಲಿ ಜರುಗಿಸಲು ಸೇರಿದ್ದ ಸಭೆಯು ನಿರ್ಧರಿಸಿತು. ಶಿವನಗೌಡ ಪಾಟೀಲ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಭೆಯನ್ನುದ್ದೇಶಿಸಿ ಕರವೇ ಜಿಲ್ಲಾಧ್ಯಕ್ಷ ಹನುಮಂತ ಅಬ್ಬಿಗೇರಿ, ಜೈ ಭೀಮ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಮೈಲಾರಪ್ಪ ಚಳ್ಳಮರದ, ವೀರಪ್ಪಜ್ಜನರ ಗ್ರಂಥ ಬಿಡುಗಡೆ ಕುರಿತು ನಿವೃತ್ತ ಉಪನ್ಯಾಸಕ ದಿಲೀಪ ಮುಗಳಿ ಮಾತನಾಡಿದರು.

ರೋಣ ಬೂದೀಶ್ವರ ಮಠದ ಡಾ. ವಿಶ್ವನಾಥ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಡಾ. ಎಂ.ಸಿ. ಚಪ್ಪನ್ನಮಠ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಎಂ.ಎ. ಹಿರೇವಡೆಯರ ಅತಿಥಿಗಳಾಗಿದ್ದರು. ಬಸವರಾಜ ಜಾಲೀಹಾಳ ಸ್ವಾಗತಿಸಿದರು. ಡಾ. ಎಲ್.ಎಸ್. ಗೌರಿ ನಿರೂಪಿಸಿದರು. ಉಪಾಧ್ಯಕ್ಷ ಕೆ.ಎಸ್. ಕೋರಧಾನ್ಯಮಠ ವಂದಿಸಿದರು.

ಪುರಾಣದ ಸಂದರ್ಭದಲ್ಲಿ ನಾಡಿನ ಅನೇಕ ಹರ-ಗುರು-ಚರ ಮೂರ್ತಿಗಳು ಉಪಸ್ಥಿತರಿದ್ದು, ಭಕ್ತರನ್ನು ಆಶೀರ್ವದಿಸಲಿದ್ದಾರೆ. ಕುಷ್ಟಗಿಯ ವೀರಭದ್ರ ಶಿವಾಚಾರ್ಯರು, ಯಲಬುರ್ಗಾದ ಮುರಡಿ ಹಿರೇಮಠದ ಬಸವಲಿಂಗ ಸ್ವಾಮಿಗಳು, ರೋಣ ಗುಲಗಂಜಿ ಮಠದ ಗುರುಪಾದ ದೇವರು, ಕೊತಬಾಳ ಅಂಕಲಿಮಠದ ಶ್ರೀಗಳು, ಸಿದ್ಧನಕೊಳ್ಳದ ಧರ್ಮಾಧಿಕಾರಿ ಡಾ. ಶಿವಕುಮಾರ ಸ್ವಾಮಿಗಳು, ಕುಕನೂರಿನ ಮಹಾದೇವ ಸ್ವಾಮಿಗಳು, ಅಳವಂಡಿಯ ಮರುಳಾರಾಧ್ಯರನ್ನು ಆಮಂತ್ರಿಸಲು ನಿರ್ಧರಿಸಲಾಯಿತು.


Spread the love

LEAVE A REPLY

Please enter your comment!
Please enter your name here