ಎತ್ತುಗಳಿಗೆ ತೌಡು, ಹಿಂಡಿ ವಿತರಣೆ ಮಾಡಿ ಮದರಿಮಠ ಗೆಳೆಯರಿಂದ ವಿನೂತನ ರೀತಿಯಲ್ಲಿ ಜನ್ಮದಿನ ಆಚರಣೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ಗಣ್ಯ ವರ್ತಕರಾದ ಸದಾಶಿವಯ್ಯ ಮದರಿಮಠ ಅವರ 51ನೇ ಜನ್ಮದಿನವನ್ನು ಅವರ ಗೆಳೆಯರ ಬಳಗ, ಎಪಿಎಂಸಿಯ ವರ್ತಕರು ವಿನೂತನ ರೀತಿಯಲ್ಲಿ ಸೋಮವಾರ ಆಚರಿಸಿದರು.

Advertisement

ಎಪಿಎಂಸಿಯ ಚಕ್ಕಡಿಯವರಿಗೆ ಹಾಗೂ ಹಮಾಲರಿಗೆ ಉಪಹಾರದ ವ್ಯವಸ್ಥೆ, ಚಕ್ಕಡಿಯವರ ಎತ್ತುಗಳಿಗೆ ಸುಮಾರು 12 ಚೀಲ ತೌಡು, 10 ಚೀಲ ಶೇಂಗಾ ಹಿಂಡಿಯನ್ನು ಪಶು ಆಹಾರವಾಗಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಗದಗ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಮಾತನಾಡಿ, ಜನ್ಮದಿನ, ಮದುವೆ ವಾರ್ಷಿಕೋತ್ಸವ ಮುಂತಾದ ಸಂದರ್ಭಗಳಲ್ಲಿ ಕೇಕ್ ಕತ್ತರಿಸಿ ಮೋಜು-ಮಸ್ತಿಗೆ ಹಣ ದುಂದುವೆಚ್ಚ ಮಾಡದೇ ಈ ರೀತಿಯ ಒಳ್ಳೆಯ ಕಾರ್ಯಕ್ಕೆ ಸದ್ವಿನಿಯೋಗ ಮಾಡಲಾಗಿದೆ. ಕೊಟ್ಟಿದ್ದು ಅಲ್ಪವಾದರೂ ಇಂತಹ ಕಾರ್ಯ ಇನ್ನೊಬ್ಬರಿಗೆ ಮಾದರಿ, ಸ್ಪೂರ್ತಿ ನೀಡುವಂತಿದೆ ಎಂದು ಬಣ್ಣಿಸಿದರು.

ಗಣ್ಯ ವರ್ತಕರಾದ ಚಂದ್ರು ಬಾಳಿಹಳ್ಳಿಮಠ, ಚನ್ನಯ್ಯ ಹಿರೇಮಠ, ರಾಜು ಕುರಡಗಿ, ಸಾಮಾಜಿಕ ಕಾರ್ಯಕರ್ತರಾದ ರವಿ ಶಿದ್ಲಿಂಗ್ ಸೇರಿದಂತೆ ಹಲವರು ಸದಾಶಿವಯ್ಯ ಮದರಿಮಠ ಅವರ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.

ಚಕ್ಕಡಿಯವರ ಸಂಘದ ಉಪಾಧ್ಯಕ್ಷ ಸಲೀಂಸಾಹೇಬ ಮುಲ್ಲಾ ಸೇರಿದಂತೆ ಇತರ ಸದಸ್ಯರು, ಶ್ರಮಿಕರು, ಗದಗ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ತಾತನಗೌಡ ಪಾಟೀಲ, ಕಾರ್ಯದರ್ಶಿ ಅಶೋಕ ಪಾಟೀಲ, ಎಸ್.ಪಿ. ಸಂಶಿಮಠ, ಹರೀಶ ಶಹಾ, ಗಂಗಾಧರ ಗಡ್ಡಿ, ಗುರು ತಡಸದ, ಶ್ರೀಧರ ಧರ್ಮಾಯತ, ಬಸವರಾಜ ಅಂಗಡಿ, ವ್ಹಿ.ಸಿ. ಬಳ್ಳೋಳ್ಳಿ, ವಿನೋದ ಭಾಂಡಗೆ, ಉಮೇಶ ಹುಬ್ಬಳ್ಳಿ, ಮಂಜು ಚನ್ನಪ್ಪನವರ, ವ್ಹಿ.ಕೆ. ಗುರುಮಠ, ಪರಶುರಾಮ ಹಬೀಬ, ಅಪ್ಪಣ್ಣ ಗೊಡಚಿ, ಪ್ರಕಾಶ ಉಗಲಾಟ, ಮುರುಘರಾಜೇಂದ್ರ ಬಡ್ನಿ, ಪ್ರಸಾದ ಶಿಗ್ಲಿಮಠ, ವಿಶ್ವನಾಥ ಯಳಮಲಿ, ಚನ್ನವೀರ ಹುಣಶೀಕಟ್ಟಿ, ಚನ್ನಯ್ಯ ಹಿರೇಹಾಳಮಠ, ಶಿವಲಿಂಗಶಾಸ್ತ್ರಿಸಿದ್ಧಾಪೂರ, ವಿನಾಯಕ ಪಾಟೀಲ, ಕುಮಾರ ಘಟ್ಟದ, ಮುತ್ತಣ್ಣ ಜಿನಗಾ, ಪರಶುರಾಮ ನಾಯ್ಕರ್, ವಿಜಯ ಗೊಡಚಿ, ನಿರಂಜನ ತಡಸದ ಸೇರಿದಂತೆ ಮುಂತಾದವರಿದ್ದರು.

ಸದಾಶಿವಯ್ಯ ಮದರಿಮಠ ಮಾತನಾಡಿ, ಗೆಳೆಯರ ಬಳಗ, ಎಪಿಎಂಸಿ ಮಾರುಕಟ್ಟೆಯ ವ್ಯಾಪಾರಸ್ಥರು ಸೇರಿ ಈ ರೀತಿಯ ವಿನೂತನ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಆಚರಿಸುವ ಮೂಲಕ ಸಮಾಜಮುಖಿಯಾಗಿ ಕಾರ್ಯ ಮಾಡುವಂತೆ ಸಂದೇಶ ರವಾನಿಸಿದ್ದಾರೆ. ಇದಕ್ಕಾಗಿ ಶ್ರಮಿಸಿದವರು ಅಭಿನಂದನಾರ್ಹರು ಎಂದರು.


Spread the love

LEAVE A REPLY

Please enter your comment!
Please enter your name here