ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಪಾಪನಾಶಿಯ ಜೆ.ಜಿ. ಇಂಟರ್ನ್ಯಾಷನಲ್ ಸಿಬಿಎಸ್ಇ ಶಾಲೆಯಲ್ಲಿ ತಾಯಂದಿರ ದಿನಾಚರಣೆಯನ್ನು ಆಚರಿಸಲಾಯಿತು. ತಾಯಂದಿರ ಪಾದಪೂಜೆ ಕಾರ್ಯಕ್ರಮದ ಸಾನ್ನಿಧ್ಯವನ್ನು ಮಣಕವಾಡ ಸಂಸ್ಥಾನಮಠದ ಶ್ರೀ ಮ.ನಿ.ಪ್ರ ಅಭಿನವ ಮೃತ್ಯುಂಜಯ ಸ್ವಾಮೀಜಿಯವರು ವಹಿಸಿದ್ದರು.
ಅಧ್ಯಕ್ಷತೆಯನ್ನು ಐ.ಎಸ್. ಪೂಜಾರ ವಹಿಸಿಕೊಂಡಿದ್ದರು. ಉಪನ್ಯಾಸಕರಾಗಿ ಪೊಲೀಸ್ ಪಾಟೀಲ್ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅತಿಥಿಗಳಾಗಿ ಅಖಿಲ್‌ಕುಮಾರ್ ಹಲಗತ್ತಿ, ಪ್ರಾಚಾರ್ಯ ಮದನ್, ಉಪಪ್ರಾಚಾರ್ಯ ಮಹಾಲಿಂಗ, ಬಸವರೆಡ್ಡಿ, ನಡೂರ್, ಕುಮಾರ್ ಪೂಜಾರ್, ಈಶ್ವರ ತಿಪ್ಪರೆಡ್ಡಿ, ಚಂದ್ರಕಾAತ್ ಚವ್ಹಾಣ, ಬಸನಗೌಡ ಪಾಟೀಲ್ ಭಾಗವಹಿಸಿದ್ದರು.



