ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಾಧನೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಹುಬ್ಬಳ್ಳಿ ನಗರದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಹುಲಕೋಟಿಯ ಚಾಂಪಿಯನ್ಸ್ ಕರಾಟೆ ಕ್ಲಬ್ ವಿಧ್ಯಾರ್ಥಿಗಳು ಭಾಗವಹಿಸಿ ಒಟ್ಟು 59 ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದು, ಕಟಾ ವಿಭಾಗದಲ್ಲಿ ಒಟ್ಟು 33 ಪ್ರಶಸ್ತಿಗಳು, ಕುಮಿಟೆ ವಿಭಾಗದಲ್ಲಿ ಒಟ್ಟು 26 ಪ್ರಶಸ್ತಿಗಳನ್ನು ಪಡೆದು ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

Advertisement

ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ಸಾಧನೆ ಮಾಡಿದ ವಿಧ್ಯಾರ್ಥಿಗಳಾದ ಸಂಪತ್, ಯಮನೂರ, ರಾಹುಲ್, ಲಿಖಿತ್, ಅನಿಕೇತ, ಮೈಲಾರಿ, ವಿನಾಯಕ, ಸಿದ್ಧರಾಮೇಶ, ಸಮರ್ಥ ಎನ್, ನಮಂತ್, ಸಮರ್ಥ ಎಚ್, ಪ್ರಶಾಂತ, ಅಕ್ಷಯ್, ನಿಂಗರಾಜ, ಮೊಹಮ್ಮದ್, ಯಶವಂತ್, ಮಲ್ಲಿಕಾರ್ಜುನ್ ಐ, ಚೇತನ್, ಕಾರ್ತೀಕ, ಮಲ್ಲಿಕಾರ್ಜುನ್ ಹೆಚ್, ಶ್ರೇಯಸ್, ದೀಕ್ಷಾ, ಜಯಶ್ರೀ, ವೈಷ್ಣವಿ, ವಿನಿತಾ, ಪ್ರಕೃತಿ, ಪೂರ್ವಿ, ಸೌಂದರ್ಯ, ಸೃಷ್ಟಿ, ಶಾಹಿನ, ವಿಕಾಸ್, ಶಶಿಕಾಂತ್, ವಿನಯ್ ಇವರಿಗೆ ಊರಿನ ಗುರು-ಹಿರಿಯರು ಮತ್ತು ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷರು, ಸದಸ್ಯರು, ತರಬೇತುದಾರರಾದ ತಿರುಮಲ ಬಿಂಕದಕಟ್ಟಿ ಹಾಗೂ ಪಾಲಕರು ಅಭಿನಂದಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here