ಟಾಲಿವುಡ್ ಸ್ಟಾರ್ ನಟ ಪವನ್ ಕಲ್ಯಾಣ್ ಸಿನಿಮಾದ ಜೊತೆ ಜೊತೆಗೆ ರಾಜಕೀಯದಲ್ಲೂ ಬ್ಯುಸಿಯಾಗಿದ್ದಾರೆ. ಆಂಧ್ರದ ಉಪಮುಖ್ಯಮಂತ್ರಿಯಾಗಿರುವ ಪವನ್ ಕಲ್ಯಾಣ್ ಸದ್ಯ ಒಪ್ಪಿಕೊಂಡಿರುವ ಸಿನಿಮಾಗಳನ್ನೂ ಮುಗಿಸುತ್ತಿದ್ದಾರೆ.ಈ ಮಧ್ಯೆ ಅವರ ಪುತ್ರ ಸಿನಿಮಾ ರಂಗಕ್ಕೆ ಎಂಟ್ರಿಕೊಡ್ತಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.
ರಾಜಕೀಯಕ್ಕೆ ಬರುವ ಮುನ್ನವೇ ಪವನ್ ಕಲ್ಯಾಣ್ ಅವರು ಓಜಿ, ಉಸ್ತಾದ್ ಭಗತ್ ಸಿಂಗ್, ಹರಿಹರ ವೀರಮಲ್ಲು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಅದರಲ್ಲಿ OG ಸಿನಿಮಾ ಮೇಲೆ ನಟನಿಗೆ ಭಾರೀ ನಿರೀಕ್ಷೆಯಿದೆ. ಹಾಗಾಗಿ ‘ಓಜಿ’ ಚಿತ್ರದಲ್ಲಿ ಪುತ್ರ ಅಕಿರಾ ನಂದ ಕೂಡ ನಟಿಸಿದ್ದಾರೆ ಎನ್ನಲಾಗಿದೆ. ಪವನ್ ಅವರ ಯೌವ್ವನದ ಪಾತ್ರದಲ್ಲಿ ಅಕಿರಾ ಕಾಣಿಸಿಕೊಳ್ಳಲಿದ್ದು, ಈಗಾಗಲೇ ಅಕಿರಾ ಭಾಗದ ಚಿತ್ರೀಕರಣ ಕೂಡ ನಡೆದಿದೆ ಎನ್ನಲಾಗಿದೆ.
OG ಸಿನಿಮಾದಿಂದ ಅಕಿರಾ ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟ ಬಳಿಕ ಮುಂದಿನ ದಿನಗಳಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ಳಬೇಕು ಎಂದು ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ.