ಗದಗ-ಬೆಟಗೇರಿ ನಗರಸಭೆಗೆ ಬಿಸಿ ಮುಟ್ಟಿಸಿದ್ದ ಹಿಂದಿನ ಡಿಸಿ: ತೆರಿಗೆ ವಸೂಲಿ ಮಾಡದ ಇಬ್ಬರು ಸಿಬ್ಬಂದಿ ಸಸ್ಪೆಂಡ್, ಸಾರ್ವಜನಿಕರ ಮೆಚ್ಚುಗೆ!

0
Spread the love

ಗದಗ: ಕೋಟಿ-ಕೋಟಿ ತೆರಿಗೆ ವಸೂಲಿ ಮಾಡಲು ಹಿಂದೇಟು ಹಾಕಿದ ಗದಗ-ಬೆಟಗೇರಿ ನಗರಸಭೆಗೆ ಹಿಂದಿನ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಬಿಸಿ ಮುಟ್ಟಿಸಿದ್ದ ಪರಿ ನೋಡಿ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

ಪ್ರಭಾವಿಗಳಿಂದ ಸರಿಸುಮಾರು 11 ಕೋಟಿ ಬಾಕಿ ಉಳಿಸಿಕೊಂಡು, ಅವರುಗಳಿಂದ ವಸೂಲಿ ಮಾಡಲು ಮೀನಾಮೇಷ ಎಣಿಸುತ್ತಿರುವ ಗದಗ-ಬೆಟಗೇರಿ ನಗರಸಭೆಗೆ ಹಿಂದಿನ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಬಿಸಿ ಮುಟ್ಟಿಸಿದ್ದರು. ಅದರಂತೆ ಟ್ಯಾಕ್ಸ್ ವಸೂಲಿ ಮಾಡದೆ ನಿರ್ಲಕ್ಷ್ಯ ತೋರಿದ ನಗರಸಭೆಯ ಇಬ್ಬರು ಸಿಬ್ಬಂದಿಗಳನ್ನು ಸಸ್ಪೆಂಡ್ ಮಾಡಿ ಖಡಕ್ ಎಚ್ಚರಿಕೆ ಕೊಟ್ಟಿದರು.

ಇನ್ನೂ ಮತ್ತೊಂದೆಡೆ ಲಕ್ಷಾಂತರ ತೆರಿಗೆ ಬಾಕಿ ಬಿಲ್ ಉಳಿಸಿಕೊಂಡ ಶ್ರೀಮಂತ ಉದ್ದಿಮೆದಾರರು, ವ್ಯಾಪಾರಸ್ಥರಿಗೆ ಒಂದು ವಾರ ಗಡುವು ಕೂಡ ಕೊಟ್ಟು ಶೀಘ್ರವೇ ತೆರಿಗೆ ತುಂಬುವಂತೆ ಖಡಕ್ ಎಚ್ಚರಿಕೆ ಕೊಟ್ಟಿದ್ದರು. ಮುಂದೆ ನೂತನ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಇನ್ನೂ ನಗರಸಭೆಗೆ ಬಿಸಿ ಮುಟ್ಟಿಸಿದ್ದ ಹಿಂದಿನ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರ ಕಾರ್ಯ ವೈಖರಿಗೆ ಗದಗ-ಬೆಟಗೇರಿ ಅವಳಿ ನಗರದ ಜನತೆ ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ. ಇನ್ನೂ ಗದಗ ಜಿಲ್ಲೆಯಲ್ಲಿ ಎಲ್ಲಾ ಪುರಸಭೆ, ಪಟ್ಟಣ ಪಂಚಾಯತ್ ಗಳು ಒಳ್ಳೆಯ ಕೆಲಸ ಮಾಡಿವೆ. ಹೀಗಾಗಿ ಪ್ರಶಂಸೆ ಪತ್ರಗಳನ್ನು ನೀಡಲಾಗಿದೆ.

ಮುಂಡರಗಿ, ಮುಳಗುಂದ 100% ತೆರಿಗೆ ಸಂಗ್ರಹ ಮಾಡಿವೆ. ಬೇರೆ ಮುನ್ಸಿಪಾಲ್ಟಿಗಳ ಸಮಸ್ಯೆ ಇಲ್ಲ. ಸಮಸ್ಯೆ ಇರೋದು ಗದಗ-ಬೆಟಗೇರಿ ನಗರಸಭೆ ಮಾತ್ರ. ಈ ವರ್ಷ 25 ಕೋಟಿ ಬಾಕಿ ಬರಬೇಕಿತ್ತು. ಈಗಾಗಲೇ 13 ಕೋಟಿ ತೆರಿಗೆ ಸಂಗ್ರಹ ಮಾಡಲಾಗಿತ್ತು. ಆದರೆ ಇನ್ನೂ 11 ಕೋಟಿ ಬಾಕಿ ಇದೆ. ಪ್ರತಿ ತಿಂಗಳ ಸಭೆ ಮಾಡಿ ಕ್ರಮ ತೆಗೆದುಕೊಂಡಿಲ್ಲ. ಗದಗನಲ್ಲಿ ಟ್ಯಾಕ್ಸ್ ವಸೂಲಿಯಲ್ಲಿ ನಿರ್ಲಕ್ಷ್ಯ ತೋರಲಾಗಿದೆ. ಹೀಗಾಗಿ ತೆರಿಗೆ ಸಂಗ್ರಹ ಮಾಡುವಲ್ಲಿ ನಿರ್ಲಕ್ಷ್ಯ ತೋರಿದ ಸಿಬ್ಬಂದಿಗಳಾದ ಡಿ.ಡಿ ಜಾಲಣ್ಣವರ ಹಾಗೂ ಗೋವಿಂದಸ್ವಾಮಿ ಕೆ ಬಳ್ಳಾರಿ ಅವರನ್ನು ಅಮಾನತು ಮಾಡಲಾಗಿದೆ.

ಈ ಇಬ್ಬರು ಸಿಬ್ಬಂದಿಗಳನ್ನು ಅಮಾನತು ಮಾಡಿ ಅಧಿಕಾರದಿಂದ ಕೆಳಗಿಳಿಯೋ ಮೊದಲು ಗೋವಿಂದರೆಡ್ಡಿ ಆದೇಶ ಹೊರಡಿಸಿದ್ದರು. ಅಷ್ಟೇ ಅಲ್ಲದೆ ಇನ್ನಿಬ್ಬರು ಸಿಬ್ಬಂದಿಗಳ ಇಲಾಖಾ ತನಿಖೆಗೆ ಆದೇಶ ಹೊರಡಿಸಿದ್ದರು. ನಾಲ್ಕೈದು ತಿಂಗಳಿಂದ ತೆರಿಗೆ ಸಂಗ್ರಹ ಆಗ್ತಾಯಿದೆ. ಆದ್ರೆ, ಕಳೆದ ವರ್ಷದ ಬಾಕಿ ತೆರಿಗೆ 8 ಲಕ್ಷ ಇದೆ. ಗದಗ-ಬೆಟಗೇರಿ ನಗರಸಭೆ ಸಿಬ್ಬಂದಿ ತೆರಿಗೆ ಸಂಗ್ರಹ ಮಾಡುವಲ್ಲಿ ಸ್ಲೋ ಇದ್ದಾರೆ. ಅಮಾನತು ಮಾಡುವ ಎಚ್ಚರಿಕೆ ನೀಡಿದ್ರೂ ನಿರ್ಲಕ್ಷ್ಯ ತೋರಿದ್ದಾರೆ. ದೊಡ್ಡ ಬಾಕಿ ಇರೋರ ಪಟ್ಟಿಮಾಡಲಾಗಿದೆ. ಹೀಗಾಗಿ ಬೆಂಗಳೂರು ಮಾಲ್ ಗಳ‌ ಮಾದರಿಯಲ್ಲಿ ಸೀಜ್ ಮಾಡಲಾಗುತ್ತದೆ ಎಂದು ಹಿಂದಿನ ಡಿಸಿ ಗೋವಿಂದ ರೆಡ್ಡಿ ಎಚ್ಚರಿಕೆ ಕೊಟ್ಟಿದ್ದರು. ಆದರೆ ನೂತನ ಜಿಲ್ಲಾಧಿಕಾರಿ ಯಾವ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಾಗಿದೆ.


Spread the love

LEAVE A REPLY

Please enter your comment!
Please enter your name here